Home ಟಾಪ್ ಸುದ್ದಿಗಳು ಕೆಮ್ಮಿನ ಸಿರಪ್ ಸೇವಿಸಿ 68 ಮಕ್ಕಳ ಸಾವು ಪ್ರಕರಣ: ಭಾರತೀಯ ಸೇರಿ 23 ಮಂದಿ ಜೈಲಿಗೆ

ಕೆಮ್ಮಿನ ಸಿರಪ್ ಸೇವಿಸಿ 68 ಮಕ್ಕಳ ಸಾವು ಪ್ರಕರಣ: ಭಾರತೀಯ ಸೇರಿ 23 ಮಂದಿ ಜೈಲಿಗೆ

ತಾಷ್ಕೆಂಟ್: ಭಾರತದ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿದ 68 ಮಕ್ಕಳು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಉಜ್ಬೇಕಿಸ್ತಾನದ ನ್ಯಾಯಾಲಯ ಆರು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಇಂದು 23 ಮಂದಿಗೆ ಜೈಲು ಶಿಕ್ಷೆ ವಿಧಿಸಿದೆ.

ಒಬ್ಬ ಭಾರತೀಯ ಪ್ರಜೆ ಸೇರಿದಂತೆ 23 ಮಂದಿಗೆ ಎರಡರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ತೆರಿಗೆ ವಂಚನೆ, ಕಳಪೆ ಗುಣಮಟ್ಟದ ಅಥವಾ ನಕಲಿ ಔಷಧಿಗಳ ಮಾರಾಟ, ಕಚೇರಿ ದುರುಪಯೋಗ, ನಿರ್ಲಕ್ಷ್ಯ, ಫೋರ್ಜರಿ ಮತ್ತು ಲಂಚದ ಆರೋಪಗಳಲ್ಲಿ ಅವರು ತಪ್ಪಿತಸ್ಥರು ಎಂದು ಸಾಬೀತಾಗಿ ಶಿಕ್ಷೆ ವಿಧಿಸಲಾಗಿದೆ.

ಉಜ್ಬೇಕಿಸ್ತಾನದಲ್ಲಿ ಭಾರತದ ಮರಿಯನ್ ಬಯೋಟೆಕ್ ಉತ್ಪಾದಿಸಿದ ಔಷಧಿಗಳನ್ನ ಮಾರಾಟ ಮಾಡುವ ಖುರಾಮಾಕ್ಸ್ ಮೆಡಿಕಲ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಸಿಂಗ್ ರಾಘವೇಂದ್ರ ಪ್ರತಾರ್‌ಗೆ 20 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ವಿಧಿಸಲಾಗಿದೆ.

Join Whatsapp
Exit mobile version