Home ಟಾಪ್ ಸುದ್ದಿಗಳು ಅಜ್ಞಾತ ಮೂಲಗಳಿಂದ ರಾಷ್ಟ್ರೀಯ ಪಕ್ಷಗಳಿಗೆ 66% ಆದಾಯ: ವರದಿ

ಅಜ್ಞಾತ ಮೂಲಗಳಿಂದ ರಾಷ್ಟ್ರೀಯ ಪಕ್ಷಗಳಿಗೆ 66% ಆದಾಯ: ವರದಿ

ಹೊಸದಿಲ್ಲಿ : 2021-22ರಲ್ಲಿ 7 ರಾಷ್ಟ್ರೀಯ ಪಕ್ಷಗಳ ಶೇಕಡಾ 66 ಕ್ಕಿಂತ ಹೆಚ್ಚು ಆದಾಯ ಅಜ್ಞಾತ ಮೂಲಗಳಿಂದ ಬಂದಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯ ಹೇಳಿದೆ.

ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಎನ್’ಸಿಪಿ, ಸಿಪಿಐ, ಸಿಪಿಐ(ಎಂ) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ಏಳು ಪಕ್ಷಗಳ ಆದಾಯ ಅಜ್ಞಾತ ಮೂಲಗಳಿಂದ ಶೇ.66.04.ಬಂದಿದೆ ಎಂದು ಹೇಳಿದೆ.

2021-22ರಲ್ಲಿ ಏಳು ರಾಷ್ಟ್ರೀಯ ಪಕ್ಷಗಳು ಅಜ್ಞಾತ ಮೂಲಗಳಿಂದ 2,172 ಕೋಟಿ ರೂಪಾಯಿ ಸಂಗ್ರಹಿಸಿವೆ ಎಂದು ಹೇಳಿದೆ. 83.41 ರಷ್ಟು ಆದಾಯವು (1,811.94 ಕೋಟಿ ರೂ.) ಅಜ್ಞಾತ ಮೂಲಗಳಿಂದ ಚುನಾವಣಾ ಬಾಂಡ್ ಗಳ ಮೂಲಕ ಬಂದಿದೆ.

ಎಡಿಆರ್ ಪ್ರಕಾರ, ಅಜ್ಞಾತ ಮೂಲವು ರಾಜಕೀಯ ಪಕ್ಷಗಳು ವಾರ್ಷಿಕ ಆಡಿಟ್ ವರದಿಯಲ್ಲಿ ಮೂಲವನ್ನು ನೀಡದೆ ಘೋಷಿಸಿದ ಆದಾಯವಾಗಿದೆ. ಅಜ್ಞಾತ ಮೂಲಗಳಲ್ಲಿ ಚುನಾವಣಾ ಬಾಂಡ್ಗಳ ಮೂಲಕ ದೇಣಿಗೆಗಳು, ಕೂಪನ್ಗಳ ಮಾರಾಟ, ಪರಿಹಾರ ನಿಧಿ, ವಿವಿಧ ಆದಾಯ, ಸ್ವಯಂಪ್ರೇರಿತ ಕೊಡುಗೆಗಳು ಮತ್ತು ಸಭೆಗಳ ಕೊಡುಗೆಗಳು ಸೇರಿವೆ.

Join Whatsapp
Exit mobile version