Home ಟಾಪ್ ಸುದ್ದಿಗಳು ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: 64 ಮಂದಿ ಮೃತ್ಯು

ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: 64 ಮಂದಿ ಮೃತ್ಯು

ಜೋಹಾನ್ಸ್ ಬರ್ಗ್: ಭೀಕರ ಅಗ್ನಿ ದುರಂತ ಸಂಭವಿಸಿ ಕನಿಷ್ಠ 64 ಜನರು ಮೃತಪಟ್ಟು, ಸುಮಾರು 43 ಜನರು ಗಾಯಗೊಂಡ ಘಟನೆ ದಕ್ಷಿಣ ಆಫ್ರಿಕಾದ ಅತಿದೊಡ್ಡ ನಗರ ಜೋಹಾನ್ಸ್ ಬರ್ಗ್ ನಲ್ಲಿ ಗುರುವಾರ ನಡೆದಿದೆ.


ನಗರದ ಮಧ್ಯಭಾಗದಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ತಡರಾತ್ರಿ 1:30ರ ಸುಮಾರಿಗೆ ಅವಘಡ ಉಂಟಾಯಿತು. ಇದುವರೆಗೆ 64 ಮೃತದೇಹಗಳು ಪತ್ತೆಯಾಗಿವೆ. ಸ್ಥಳದಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ. ದುರಂತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version