July 24, 2021

600 ಕೋಟಿ ರೂ. ವಂಚಿಸಿದ ಬಿಜೆಪಿ ನಾಯಕರಾದ ‘ಹೆಲಿಕಾಪ್ಟರ್ ಬ್ರದರ್ಸ್’ ಪರಾರಿ!

ಚೆನ್ನೈ: ಹಣವನ್ನು ದ್ವಿಗುಣಗೊಳಿಸಿ ಕೊಡುವುದಾಗಿ ನಂಬಿಸಿ ಹಲವರಿಂದ ಸುಮಾರು 600 ಕೋಟಿ ರೂ. ವಂಚಿಸಿದ ಬಿಜೆಪಿ ಮುಖಂಡರಾದ ‘ಹೆಲಿಕಾಪ್ಟರ್ ಬ್ರದರ್ಸ್’ ಎಂದು ಕರೆಯಲ್ಪಡುವ ಗಣೇಶ್ ಮತ್ತು ಸ್ವಾಮಿನಾಥನ್ ಪರಾರಿಯಾಗಿದ್ದಾರೆ.

ತಂಜಾವೂರು ಜಿಲ್ಲಾ ಕ್ರೈಮ್ ಬ್ರಾಂಚ್ ಐಪಿಸಿ ಸೆಕ್ಷನ್ 406, 420 ಮತ್ತು 120 (ಬಿ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಮೊದಲು ಡೈರಿ ಕಂಪನಿಯೊಂದನ್ನು ಪ್ರಾರಂಭಿಸಿದ ಅವರು ನಂತರ ವಿಕ್ಟರಿ ಫೈನಾನ್ಸ್ ಎಂಬ ಹಣಕಾಸು ಸಂಸ್ಥೆಯನ್ನು ಪ್ರಾರಂಭಿಸಿದರು. 2019 ರಲ್ಲಿ ಅರ್ಜುನ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್ ಎಂಬ ವಾಯುಯಾನ ಕಂಪನಿಯನ್ನು ಪ್ರಾರಂಭಿಸಿದರು.

ಗಣೇಶ್ ನ ಮಗುವಿನ ಜನ್ಮದಿನದಂದು ತಮ್ಮದೇ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಸಿದ್ದರಿಂದಾಗಿ ಇವರಿಬ್ಬರು ‘ಹೆಲಿಕಾಪ್ಟರ್ ಬ್ರದರ್ಸ್’ ಎಂದು ಪ್ರಸಿದ್ಧರಾಗಿದ್ದರು.

ಬಿಜೆಪಿಯ ಪ್ರಮುಖ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಇವರು ಒಂದು ವರ್ಷದಲ್ಲಿ ಹಣ ದ್ವಿಗುಣಗೊಳಿಸಿಕೊಡುವುದಾಗಿ ನಂಬಿಸಿ ಹಲವರನ್ನು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!