Home ಜಾಲತಾಣದಿಂದ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ದಿನಗೂಲಿ ನೌಕರ ! ಮಮ್ಮಿಕ್ಕ ಲುಕ್’ಗೆ ನೆಟ್ಟಿಗರು ಫಿದಾ !

ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ದಿನಗೂಲಿ ನೌಕರ ! ಮಮ್ಮಿಕ್ಕ ಲುಕ್’ಗೆ ನೆಟ್ಟಿಗರು ಫಿದಾ !

ಅದೃಷ್ಟ ಎಂಬುದು ಯಾವ ಸಂದರ್ಭದಲ್ಲಿ, ಯಾರ ಪಾಲಿಗೆ ಒಲಿಯುತ್ತದೆ, ಆ ಮೂಲಕ ಜೀವನದ ಪಥವೇ ಬದಲಾಗುತ್ತದೆ ಎಂಬುದು ಯಾರಿಗೂ ಊಹಿಸಲೂ ಸಾಧ್ಯವಿಲ್ಲ.
ಹೀಗೊಂದು ಅದೃಷ್ಟ ಕೇರಳದ ಕೋಝಿಕ್ಕೋಡ್‌ನಲ್ಲಿರುವ 60 ವರ್ಷದ ಮಮ್ಮಿಕ್ಕ ಎಂಬ ದಿನಗೂಲಿ ಕಾರ್ಮಿಕನನ್ನು ಹುಡುಕಿಕೊಂಡು ಬಂದಿದೆ.


ಛಾಯಾಗ್ರಾಹಕ ಶಾರಿಕ್ ವಯಿಲ್ ಅವರ ಕಣ್ಣಿಗೆ ಬಿದ್ದ ಬಳಿಕ ದಿನಗೂಲಿ‌ ನೌಕರನಾಗಿದ್ದ ಮಮ್ಮಿಕ್ಕ ಇದೀಗ ಮಾಡೆಲ್ ಆಗಿ ಮಿಂಚುತ್ತಿದ್ದಾರೆ. ಮಮ್ಮಿಕ್ಕ ಇದೀಗ ತನ್ನ ಗ್ಲಾಮರಸ್ ಲುಕ್ ಮೂಲಕ ಇಂಟರ್ ನೆಟ್ ಲೋಕದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಬದಲಾಗಿದ್ದಾರೆ. ಮಮ್ಮಿಕಾ ಅವರ ಇತ್ತೀಚಿನ ಫೋಟೋಶೂಟ್ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ದಿನಗೂಲಿ ನೌಕರನಿಂದ ಮಾಡೆಲ್ ಆಗುವ ಮೇಕ್ ಓವರ್ ವೀಡಿಯೋ ಭಾರಿ ಜನಮೆಚ್ಚುಗೆಗೆ ಪಾತ್ರವಾಗಿದೆ.
ಸ್ಥಳೀಯ ಸಂಸ್ಥೆಯೊಂದರ ಪ್ರಚಾರಕ್ಕಾಗಿ ಮಮ್ಮಿಕಾ ಇತ್ತೀಚೆಗೆ ಫೋಟೋಶೂಟ್’ವೊಂದರಲ್ಲಿ ಪಾಲ್ಗೊಂಡಿದ್ದು, ಇದರಲ್ಲಿ ಕೈಯಲ್ಲಿ ಐಪ್ಯಾಡ್‌ ಹಿಡಿದುಕೊಂಡು, ಐಷಾರಾಮಿ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಾಹಕ ಶಾರಿಕ್ ತಮ್ಮ ಇನ್’ಸ್ಟಾಗ್ರಾಮ್ ಖಾತೆಯಲ್ಲಿ ಈ‌ ವೀಡಿಯೋ ಪೋಸ್ಟ್ ಮಾಡಿದ್ದು, ಕಲಾವಿದ ಮಜ್ನಾಸ್ ಹಾಗೂ ಆಶಿಕ್ ಫುವಾದ್ ಮತ್ತು ಶಬೀಬ್ ವೈಲ್ ಮಮ್ಮಿಕ್ಕನ ಮೇಕ್ ಓವರ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಾಡೆಲ್ ಆಗಿರುವ ಕುರಿತು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳುವ ಮಮ್ಮಿಕಾ, ದಿನಗೂಲಿ ನೌಕರನಾಗಿ ಮುಂದುವರಿಯುತ್ತೇನೆ ಎಂದಿದ್ದಾರೆ.

Join Whatsapp
Exit mobile version