ನವದೆಹಲಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ‘ಪೇ–ಸಿಎಂ‘ ಅಭಿಯಾನ ಮಾಡಿದ್ದ ಕಾಂಗ್ರೆಸ್, ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೇ–ಪಿಎಂ‘ ಅಸ್ತ್ರ ಬಳಸಿದೆ. ಪ್ರಧಾನಿ ಮೋದಿ ಪೇ–ಪಿಎಂ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನೋಟು ರದ್ದತಿಯು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಮುಗಿಸಿ, ತನ್ನ 2–3 ಕೋಟ್ಯಧಿಪತಿ ಸ್ನೇಹಿತರನ್ನು ಭಾರತೀಯ ಆರ್ಥಿಕತೆಯಲ್ಲಿ ಏಕಸ್ವಾಮ್ಯ ಹೊಂದುವಂತೆ ಮಾಡಲು ‘ಪೇ–ಪಿಎಂ‘ ಮಾಡಿರುವ ಉದ್ದೇಶಪೂರ್ವಕ ನಡೆ‘ ಎಂದು ಬರೆದು ಕೊಂಡಿದ್ದಾರೆ.
Demonetisation was a deliberate move by ‘PayPM’ to ensure 2-3 of his billionaire friends monopolise India’s economy by finishing small & medium businesses. pic.twitter.com/PaTRKnSPCx
— Rahul Gandhi (@RahulGandhi) November 8, 2022