Home ಟಾಪ್ ಸುದ್ದಿಗಳು ಕೆನಡಾದಲ್ಲಿ 4 ಮಕ್ಕಳ ಸಹಿತ 6 ಶ್ರೀಲಂಕಾ ಪ್ರಜೆಗಳನ್ನು ಇರಿದು ಹತ್ಯೆ

ಕೆನಡಾದಲ್ಲಿ 4 ಮಕ್ಕಳ ಸಹಿತ 6 ಶ್ರೀಲಂಕಾ ಪ್ರಜೆಗಳನ್ನು ಇರಿದು ಹತ್ಯೆ

ಒಟ್ಟಾವ: 19 ವರ್ಷದ ವಿದ್ಯಾರ್ಥಿಯೊಬ್ಬ 4 ಮಕ್ಕಳ ಸಹಿತ 6 ಮಂದಿಯನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಪ್ರಕರಣ ವರದಿಯಾಗಿದೆ. ಘಟನೆ ಕೆನಡಾದ ರಾಜಧಾನಿ ಒಟ್ಟಾವದ ಬರ್ಹಾವೆನ್‍ನ ನೈಋತ್ಯದಲ್ಲಿರುವ ಪ್ರದೇಶದಲ್ಲಿನ ಮನೆಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮತ್ತು ಹತ್ಯೆಯಾದವರು ಶ್ರೀಲಂಕಾದ ಪ್ರಜೆಗಳು. ಆರೋಪಿ ಈ ಹಿಂದೆಯೇ ಕೆನಡಾದಲ್ಲಿ ನೆಲೆಸಿದ್ದರೆ, ಕೊಲೆಗೀಡಾದ ಕುಟುಂಬದವರು ಇತ್ತೀಚೆಗೆ ಕೆನಡಾಕ್ಕೆ ಆಗಮಿಸಿದ್ದರು.

ಆರೋಪಿ ಫೆಬ್ರಿಯೊ ಡಿಝೊಯ್ಸಾ ಸಂತ್ರಸ್ತ ಕುಟುಂಬದವರ ಪರಿಚಯಸ್ಥನಾಗಿದ್ದು ಅವರ ಮನೆಯಲ್ಲೇ ವಾಸವಿದ್ದ. ಬುಧವಾರ ರಾತ್ರಿ ಯಾವುದೋ ಕಾರಣಕ್ಕೆ ಮನೆಯವರೊಂದಿಗೆ ಜಗಳವಾಗಿದ್ದು ಬಳಿಕ ಈತ ಹರಿತವಾದ ಆಯುಧದಿಂದ ಮನೆಯಲ್ಲಿದ್ದ 6 ಮಂದಿಯನ್ನು ಇರಿದು ಹತ್ಯೆ ಮಾಡಿದ್ದಾನೆ. 35 ವರ್ಷದ ಮಹಿಳೆ, 7 ವರ್ಷದ ಬಾಲಕ, 4 ವರ್ಷದ ಬಾಲಕಿ, ಎರಡೂವರೆ ವರ್ಷದ ಹೆಣ್ಣು ಮಗು ಮತ್ತು ಕುಟುಂಬದ ಪರಿಚಯಸ್ಥನಾಗಿರುವ 40 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕುಟುಂಬದ ಯಜಮಾನ ಚೂರಿ ಇರಿತದಿಂದ ಗಾಯಗೊಂಡಿದ್ದರೂ ಹೊರಗೆ ಓಡಿ ತಪ್ಪಿಸಿಕೊಂಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ವರದಿಯಾಗಿದೆ.

Join Whatsapp
Exit mobile version