Home ಟಾಪ್ ಸುದ್ದಿಗಳು ಕಾರು ಮರಕ್ಕೆ ಡಿಕ್ಕಿ: 6 ಮಂದಿ ಸಾವು

ಕಾರು ಮರಕ್ಕೆ ಡಿಕ್ಕಿ: 6 ಮಂದಿ ಸಾವು

ಗಿರಿದಿಹ್: ಮದುವೆ ಮೆರವಣಿಗೆ ಮುಗಿಸಿ ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದು 6 ಮಂದಿ ಸಾವನ್ನಪ್ಪಿರುವ ದುರ್ಘಟನೆ ಜಾರ್ಖಂಡ್ ನ ಗಿರಿದಿಹ್ ನಲ್ಲಿ ನಡೆದಿದೆ.


ಘಟನೆಯ ಬಗ್ಗೆ ಮಾಹಿತಿ ಪಡೆದ ಮುಫಸಿಲ್ ಪೊಲೀಸ್ ಠಾಣೆ ಪ್ರಭಾರಿ ಕಮಲೇಶ್ ಪಾಸ್ವಾನ್ ಘಟನಾ ಸ್ಥಳಕ್ಕೆ ಆಗಮಿಸಿದಾಗ ಸ್ಥಳದಲ್ಲಿ 5 ಜನ ಸಾವನ್ನಪ್ಪಿದ್ದರು. ತಕ್ಷಣವೇ ಗಾಯಗೊಂಡ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಸದರ್ ಆಸ್ಪತ್ರೆಗೆ ದಾಖಲಿಸಿದರು. ಇಲ್ಲಿ ಚಿಕಿತ್ಸೆ ವೇಳೆ ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 6 ಕ್ಕೆ ಏರಿದೆ ಎಂದು ತಿಳಿದು ಬಂದಿದೆ.

Join Whatsapp
Exit mobile version