Home ಟಾಪ್ ಸುದ್ದಿಗಳು ಎಂಟು ಪ್ರಯಾಣಿಕರ ವಾಹನದಲ್ಲಿ 6 ಏರ್‌ ಬ್ಯಾಗ್‌ ಕಡ್ಡಾಯ: ನಿತಿನ್‌ ಗಡ್ಕರಿ

ಎಂಟು ಪ್ರಯಾಣಿಕರ ವಾಹನದಲ್ಲಿ 6 ಏರ್‌ ಬ್ಯಾಗ್‌ ಕಡ್ಡಾಯ: ನಿತಿನ್‌ ಗಡ್ಕರಿ

ನವದೆಹಲಿ: ಎಂಟು ಪ್ರಯಾಣಿಕರನ್ನು ಹೊತ್ತೂಯ್ಯುವಂಥ ಮೋಟಾರು ವಾಹನಗಳಲ್ಲಿ ಕನಿಷ್ಠ 6 ಏರ್‌ ಬ್ಯಾಗ್‌ ಗಳು ಕಡ್ಡಾಯವಾಗಿ ಇರಲೇಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ನಾವು ಈಗಾಗಲೇ ಕಾರಿನ ಚಾಲಕನ ಸೀಟಿಗೆ ಮತ್ತು ಮುಂಬದಿ ಸವಾರನ ಸೀಟಿಗೆ ಏರ್‌ ಬ್ಯಾಗ್‌ ಕಡ್ಡಾಯಗೊಳಿಸಿದ್ದೇವೆ. ಈಗ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಗರಿಷ್ಠ 8 ಪ್ರಯಾಣಿಕರ ಆಸನ ಸಾಮರ್ಥ್ಯದ ವಾಹನಗಳಲ್ಲಿ ಕನಿಷ್ಠ 6 ಏರ್‌ ಬ್ಯಾಗ್‌ ಕಡ್ಡಾಯವಾಗಿ ಅಳವಡಿಸುವಂತೆ ಕಾರು ತಯಾರಕ ಕಂಪನಿಗಳಿಗೆ ಸೂಚಿಸಲಿದ್ದೇವೆ ಎಂದು ಹೇಳಿದ್ದಾರೆ.

Join Whatsapp
Exit mobile version