6,000 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ವೈದ್ಯನಿಗೆ 545 ಕೋಟಿ ರೂ. ದಂಡ!

Prasthutha|

ವಾಷಿಂಗ್ಟನ್: 6,000 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮಾಜಿ ಸ್ತ್ರೀರೋಗ ತಜ್ಞನಿಗೆ ನ್ಯಾಯಾಲಯವು ಭಾರಿ ಮೊತ್ತದ ದಂಡ ವಿಧಿಸಿದೆ. ಮಾಜಿ ಸ್ತ್ರೀರೋಗ ತಜ್ಞ ಜೇಮ್ಸ್ ಹೀಪ್ಸ್ ಗೆ ಸುಮಾರು 545 ಕೋಟಿ ರೂ. ಅಥವಾ 7.3 ಕೋಟಿ ಡಾಲರ್ ದಂಡ ವಿಧಿಸಲಾಗಿದೆ.

- Advertisement -

ಜೇಮ್ಸ್ ಹೀಪ್ಸ್ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ವಿಶ್ವವಿದ್ಯಾಲಯದ ಮಾಜಿ ಸ್ತ್ರೀರೋಗತಜ್ಞ. ಆತನ ವಿರುದ್ಧ ಸಾವಿರಾರು ಮಹಿಳೆಯರು ಲೈಂಗಿಕ ಕಿರುಕುಳ ದೂರು ನೀಡಿದ್ದರು. ಇದರ ಬೆನ್ನಲ್ಲೇ 2019 ರಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.

ಆರಂಭದಲ್ಲಿ ದೂರು ದಾಖಲಿಸಿದರೂ ಪೊಲೀಸರು ಮತ್ತು ವಿಶ್ವವಿದ್ಯಾಲಯವು ಹೀಪ್ಸ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ದೂರುದಾರರು ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ತರುವಾಯ, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.

- Advertisement -

ಚಿಕಿತ್ಸೆಗಾಗಿ ಬಂದ ಮಹಿಳೆಯರ ಬಳಿ ಹೀಪ್ಸ್ ತುಂಬಾ ಕೆಟ್ಟದಾಗಿ ವ್ಯವಹರಿಸುತ್ತಿದ್ದ. ಸ್ಕ್ಯಾನಿಂಗ್ ಸಮಯದಲ್ಲಿ ದುರುದ್ದೇಶದಿಂದ ಮಹಿಳೆಯರ ಖಾಸಗಿ ಸ್ಥಳಗಳನ್ನು ಸ್ಪರ್ಶಿಸಿ ಹಲವಾರು ಮಹಿಳೆಯರನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಆತನ ವಿರುದ್ಧ ಒಟ್ಟು 21 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

64 ವರ್ಷದ ಹೀಪ್ಸ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆಯೂ ವಿಚಾರಣೆಯನ್ನು ಎದುರಿಸುತ್ತಿದ್ದಾನೆ. 60 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧವನ್ನು ಹೀಪ್ಸ್ ಮಾಡಿದ್ದಾನೆ ಎಂದು ಪ್ರಾಸಿಕ್ಯೂಟರ್ ಈ ವೇಳೆ ತಿಳಿಸಿದ್ದಾರೆ.

Join Whatsapp