ಮುಂಬೈ: ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ದೇಶದ ಸೆಮಿಕಂಡಕ್ಟರ್ ವಲಯದಲ್ಲಿ ಬರೋಬ್ಬರಿ 5,000 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ. ಮಹಾರಾಷ್ಟ್ರದಲ್ಲಿ ಆಆರ್‌ಪಿ ಎಲೆಕ್ಟ್ರಾನಿಕ್ಸ್ ವತಿಯಿಂದ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲಿಸಲಾಗುತ್ತಿದೆ. ಸೆಮಿಕಂಡಕ್ಟರ್ ಘಟಕಕ್ಕಾಗಿ ಹಂತ ಹಂತವಾಗಿ ಮುಂದಿನ 5 ವರ್ಷಗಳಿಗೆ ಸಚಿನ್ ತೆಂಡುಲ್ಕರ್ ಈ ಹೂಡಿಕೆ ಮಾಡುತ್ತಿದ್ದಾರೆ.
ನವಿಮುಂಬಯಿಯಲ್ಲಿರುವ ಆಆರ್‌ಪಿ ಎಲೆಕ್ಟ್ರಾನಿಕ್ಸ್‌ಗೆ ಸೇರಿದ 25,000 ಚ.ಡಿ. ಸ್ಥಳದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸಚಿನ್ ತೆಂಡುಲ್ಕರ್ ಮಹತ್ತರವಾದ ಈ ಘೋಷಣೆ ಮಾಡಿದ್ದಾರೆ.