Home ಟಾಪ್ ಸುದ್ದಿಗಳು ಸಂಚಾರ ನಿಯಮ​ ಉಲ್ಲಂಘನೆ| ದಂಡಕ್ಕೆ 50% ರಿಯಾಯಿತಿ, 8 ದಿನದಲ್ಲಿ 85‌.83 ಕೋಟಿ ರೂ.‌ ಸಂಗ್ರಹ

ಸಂಚಾರ ನಿಯಮ​ ಉಲ್ಲಂಘನೆ| ದಂಡಕ್ಕೆ 50% ರಿಯಾಯಿತಿ, 8 ದಿನದಲ್ಲಿ 85‌.83 ಕೋಟಿ ರೂ.‌ ಸಂಗ್ರಹ

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿಸುವವರಿಗೆ ಶೇ. 50 ವಿನಾಯಿತಿ ಘೋಷಣೆ ಮಾಡಿದ ಬೆನ್ನಲ್ಲೇ ವಾಹನ ಸವಾರರು ದಂಡ ಪಾವತಿಸಲು ಮುಗಿಬಿದ್ದಿದ್ದಾರೆ.

8ನೇ ದಿನವಾದ ಫೆ.10ನೇ ತಾರೀಕಿನಂದು 67, 0602 ಪ್ರಕರಣಗಳಲ್ಲಿ 17.61 ಕೋಟಿ‌ ರೂಪಾಯಿ ದಂಡದ ಹಣ ಸಂಗ್ರಹವಾಗಿದೆ. ಇದರೊಂದಿಗೆ 31.11 ಲಕ್ಷ ಪ್ರಕರಣಗಳಲ್ಲಿ 85‌.83 ಕೋಟಿ ರೂಪಾಯಿ ಹಣ ಕಲೆಕ್ಷನ್ ಆಗಿದೆ.

50% ರಿಯಾಯಿತಿಯಲ್ಲಿ ದಂಡ ಪಾವತಿಗೆ ಇಂದು (ಫೆಬ್ರವರಿ 11) ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರ ನಿಮಯ ಉಲ್ಲಂಘಿಸಿದ ವಾಹನ ಸವಾರರು ಕಳೆದ ಎರಡು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದಂಡ ಪಾವತಿ ಮಾಡುತ್ತಿದ್ದಾರೆ. ಇಂದು ಕೊನೆ ದಿನವಾಗಿದ್ದರಿಂದ ದಂಡದ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

Join Whatsapp
Exit mobile version