ಸಂಚಾರ ಉಲ್ಲಂಘನೆಯ ದಂಡಕ್ಕೆ ಶೇ.50 ರಿಯಾಯಿತಿ| 2 ವಾರ ವಿಸ್ತರಣೆ

Prasthutha|

ಬೆಂಗಳೂರು: ವಾಹನ ಸವಾರರ ಬೇಡಿಕೆ, ಟ್ರಾಫಿಕ್‌ ಕಮಿಷನರ್ ಮನವಿ ಹಿನ್ನೆಲೆ ಶೇಕಡಾ 50ರಷ್ಟು ರಿಯಾಯಿತಿ ಮೇಲೆ ದಂಡ ಕಟ್ಟಲು ನೀಡಿದ್ದ ಗಡುವನ್ನು ಮತ್ತೆ 15 ದಿನಗಳ ಕಾಲ ವಿಸ್ತರಿಸಿ ಕರ್ನಾಟಕ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.

- Advertisement -

ಟ್ರಾಫಿಕ್ ದಂಡವನ್ನು ರಿಯಾಯಿತಿ ಮೇಲೆ ಪಾವತಿಸುವ ದಿನಾಂಕ ಫೆಬ್ರವರಿ 11ರಂದು ಮುಕ್ತಾಯವಾಗಿದೆ. ಅನೇಕ ಸವಾರರು ದಂಡ ಪಾವತಿಸಲು ಬಾಕಿಯಾಗಿದ್ದು, ದಿನಾಂಕ ವಿಸ್ತರಿಸುವಂತೆ ಮನವಿ ಮಾಡಲಾಗಿತ್ತು. ಇಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಸಂಚಾರಿ ದಂಡ ಪಾವತಿ ಅವಧಿ 15 ದಿನಕ್ಕೆ ವಿಸ್ತರಿಸುವ ಪ್ರಸ್ತಾವನೆ ಮುಂದಿಡಲಾಯಿತು. ಸದ್ಯ 15ದಿನ ವಿಸ್ತರಿಸಿ ಆದೇಶಿಸಲಾಗಿದೆ.

Join Whatsapp
Exit mobile version