Home ಟಾಪ್ ಸುದ್ದಿಗಳು ಕಾಂಗ್ರೆಸ್ ಸರ್ಕಾರದಲ್ಲಿ ಶೇ.50ರಷ್ಟು ಕಮಿಷನ್: ಯತ್ನಾಳ್ ಆರೋಪ

ಕಾಂಗ್ರೆಸ್ ಸರ್ಕಾರದಲ್ಲಿ ಶೇ.50ರಷ್ಟು ಕಮಿಷನ್: ಯತ್ನಾಳ್ ಆರೋಪ

ವಿಜಯಪುರ: ಕಾಂಗ್ರೆಸ್ ಸರ್ಕಾರದಲ್ಲಿ 50% ಭ್ರಷ್ಟಾಚಾರ ನಡೆಯುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ.


ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೇ.13ರಷ್ಟು ಕಮಿಷನ್ ಇಲ್ಲದೆ ಗುತ್ತಿಗೆದಾರರಿಗೆ ಎನ್ ಒಸಿ ನೀಡುತ್ತಿಲ್ಲ. ಎಲ್ಲವೂ ಸೇರಿದರೆ ಶೇಕಡಾ 50ರಷ್ಟು ಕಮಿಷನ್ ಗೆ ಬಂದು ನಿಲ್ಲುತ್ತದೆ. ನಮ್ಮ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡುತ್ತಿದ್ದರು. ಆದರೆ ಇವರು 50 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದರು.


ದಲಿತ ಸಮುದಾಯದ ಯುವಕನಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ಮೋದಿ ಪ್ರಧಾನಿ ಮಾಡಿಲು ಎಲ್ಲರೂ ಕೈಜೋಡಸಲಿದ್ದೇವೆ ಎಂದಿದ್ದಾರೆ.

Join Whatsapp
Exit mobile version