Home ಟಾಪ್ ಸುದ್ದಿಗಳು ಆ್ಯಂಬುಲೆನ್ಸ್ ಗೆ ಕಾರು ಡಿಕ್ಕಿ: ಐವರು ಮೃತ್ಯು, 12 ಮಂದಿ ಗಂಭೀರ

ಆ್ಯಂಬುಲೆನ್ಸ್ ಗೆ ಕಾರು ಡಿಕ್ಕಿ: ಐವರು ಮೃತ್ಯು, 12 ಮಂದಿ ಗಂಭೀರ

ಮುಂಬೈ: ನಿಂತಿದ್ದ ಆ್ಯಂಬುಲೆನ್ಸ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಐವರು ಮೃತಪಟ್ಟ ಘಟನೆ ಮುಂಬೈನ ಬಾಂದ್ರಾ-ವರ್ಲಿ ಸಮುದ್ರ ಬಳಿ ನಡೆದಿದೆ.

ಮುಂಜಾನೆ 3:30ರ ಸುಮಾರಿಗೆ ಆ್ಯಂಬುಲೆನ್ಸ್ ಮತ್ತು ಇತರ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವೇಳೆ ಅತಿವೇಗವಾಗಿ ಬಂದ ಕಾರೊಂದು ವಾಹನಕ್ಕೆ ಡಿಕ್ಕಿ ಹೊಡೆದು ಐವರು ಸಾವನ್ನಪ್ಪಿದ್ದು, 12 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಅಪಘಾತದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

Join Whatsapp
Exit mobile version