Home ಟಾಪ್ ಸುದ್ದಿಗಳು ದೆಹಲಿಯಲ್ಲಿ ಗ್ಯಾಸ್ ಸೋರಿಕೆ: ಐದು ಮಂದಿ ಆಸ್ಪತ್ರೆಗೆ ದಾಖಲು

ದೆಹಲಿಯಲ್ಲಿ ಗ್ಯಾಸ್ ಸೋರಿಕೆ: ಐದು ಮಂದಿ ಆಸ್ಪತ್ರೆಗೆ ದಾಖಲು

ಆಗ್ರಾ: ನೈಋತ್ಯ ದೆಹಲಿಯ ಆರ್.ಕೆ.ಪುರಂ ಎಂಬಲ್ಲಿನ ಏಕತಾ ವಿಹಾರದಲ್ಲಿ ಗ್ಯಾಸ್ ಸೋರಿಕೆ ಉಂಟಾದ ಪರಿಣಾಮ ಸ್ಥಳೀಯರಲ್ಲಿ ಕಣ್ಣಿನಲ್ಲಿ ತುರಿಕೆ ಕಾಣಿಸಿಕೊಂಡಿದ್ದು, ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಆರ್. ಕೆ. ಪುರಂ ಪ್ರದೇಶದ ಸ್ಲಮ್ ಕ್ಲಸ್ಟರ್ ನ ನಿವಾಸಿಗಳೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹೊತ್ತದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಗ್ನಿ ಶಾಮಕ ದಳ ತಕ್ಷಣ ಸ್ಥಳಕ್ಕೆ ಧಾವಿಸಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Join Whatsapp
Exit mobile version