Home ಟಾಪ್ ಸುದ್ದಿಗಳು ನಾವು ಘೋಷಿಸಿದ 5 ಗ್ಯಾರಂಟಿ ಜಾರಿ ನಿಶ್ಚಿತ: ಟ್ವೀಟ್ ಮೂಲಕ ಬಿಜೆಪಿಗೆ ಕಾಂಗ್ರೆಸ್ ಟಾಂಗ್

ನಾವು ಘೋಷಿಸಿದ 5 ಗ್ಯಾರಂಟಿ ಜಾರಿ ನಿಶ್ಚಿತ: ಟ್ವೀಟ್ ಮೂಲಕ ಬಿಜೆಪಿಗೆ ಕಾಂಗ್ರೆಸ್ ಟಾಂಗ್

ಬೆಂಗಳೂರು: ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳಿಂದ ರಾಜ್ಯದ ವಾತಾವರಣವನ್ನು ಹಾಳುಮಾಡುತ್ತಿದೆ ಎಂದು ಬಿಜೆಪಿ ಹೇಳಿಕೆ ನೀಡಿದ್ದು, ಟ್ವೀಟ್ ಮೂಲಕ ಬಿಜೆಪಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.


ಈ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದ್ದು, ನಾವು ಘೋಷಿಸಿದ 5 ಗ್ಯಾರಂಟಿ ಜಾರಿಗೊಳಿಸುವುದು ನಿಶ್ಚಿತ. ನಾವು ನಮ್ಮ ಜನರ ಹಿತ ಕಾಪಾಡುವ ಬದ್ಧತೆ ಹೊಂದಿದ್ದೇವೆ. ಬಿಜೆಪಿ ನಾಯಕರಿಗೆ ಕರ್ನಾಟಕದ ಜನ ತಪರಾಕಿ ನೀಡಿದ್ದಾರೆ.


ಕನ್ನಡಿಗರು ನೀಡಿದ ತಪರಾಕಿಗೆ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯಲಿ. ಹಾಗೆಯೇ ವಿಪಕ್ಷ ನಾಯಕನ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಹುಡುಕಿಕೊಳ್ಳಲಿ ಎಂದು ಹೇಳಿದೆ.

Join Whatsapp
Exit mobile version