5 ವರ್ಷದ ಬಾಲಕಿಯ ಹತ್ಯೆ ಪ್ರಕರಣ | ವಿಧಾನಸಭೆ ಕಟ್ಟಡದ ಎದುರು ಆತ್ಮಹತ್ಯೆಗೆ ಯತ್ನಿಸಿದ ಪೋಷಕರು

Prasthutha|

ಬುಭನೇಶ್ವರ್: ಒಡಿಶಾದಲ್ಲಿ ಹತ್ಯೆಗೊಳಗಾದ 5 ವರ್ಷದ ಬಾಲಕಿಯ ಪೋಷಕರು ರಾಜ್ಯ ವಿಧಾನಸಭೆಯ ಕಟ್ಟಡಕ್ಕೆ ತೆರಳಿ ತಮ್ಮ ಮೇಲೆ ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಈ ವೇಳೆ ಅವರನ್ನು ತಡೆದು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ಜುಲೈ 10ರಂದು ತಮ್ಮ ಮನೆಯ ಬಳಿ ಆಟವಾಡುತ್ತಿದ್ದಾಗ ಅವರ ಪುಟ್ಟ ಮಗಳನ್ನು ಅಪಹರಿಸಲಾಗಿತ್ತು ಎಂದು ಅಶೋಕ್ ಸಾಹು ಆರೋಪಿಸಿದ್ದಾರೆ.

- Advertisement -

ಕೆಲವು ದಿನಗಳ ನಂತರ, ಅವರ ಮನೆಯ ಹಿತ್ತಲಿನಲ್ಲಿ ಮೃತದೇಹವು ಕಣ್ಣುಗಳನ್ನು ಕಿತ್ತೆಗೆದು, ಮೂತ್ರಪಿಂಡಗಳನ್ನು ತೆಗೆದುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

“ನಾವು ನಾಯಗರ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಎರಡು ವಾರಗಳ ನಂತರ ಆಕೆಯ ಶವವನ್ನು ನಮ್ಮ ಹಿತ್ತಲಿನಲ್ಲಿ ಕಂಡುಹಿಡಿಯಲಾಗಿತ್ತು. ನಾವು ಆರೋಪಿಯನ್ನು ಹೆಸರಿಸಿದ್ದರೂ, ಅವನನ್ನು ಶಿಕ್ಷಿಸಲು ಯಾವುದೇ ಕ್ರಮ ಕೈಗೊಂಡಿಲ್ಲ”ಎಂದು ಅಶೋಕ್ ಸಾಹು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

- Advertisement -