Home ಟಾಪ್ ಸುದ್ದಿಗಳು ದುಬೈ ಡ್ಯೂಟಿ ಫ್ರೀ ಲಕ್ಕಿ ಡ್ರಾದಲ್ಲಿ ಭಾರತೀಯ ವ್ಯಕ್ತಿಗೆ ದುಬಾರಿ ರೇಂಜ್ ರೊವರ್ ಕಾರು

ದುಬೈ ಡ್ಯೂಟಿ ಫ್ರೀ ಲಕ್ಕಿ ಡ್ರಾದಲ್ಲಿ ಭಾರತೀಯ ವ್ಯಕ್ತಿಗೆ ದುಬಾರಿ ರೇಂಜ್ ರೊವರ್ ಕಾರು

ದೋಹಾ: ದುಬೈ ಏರ್ ಶೋ ಪ್ರಯುಕ್ತ ನವೆಂಬರ್ 16 ರಂದು ನಡೆದ ದುಬೈ ಡ್ಯೂಟಿ ಫ್ರೀ ಲಕ್ಕೀ ಡ್ರಾದಲ್ಲಿ ಕತಾರ್ ಮೂಲದ ಭಾರತೀಯ ಪ್ರಜೆ, ರೇಂಜ್ ರೊವರ್ ಸ್ಪೋರ್ಟ್ ಎಚ್.ಎಸ್.ಇ ಡೈನಾಮಿಕ್ 5.0 ಗೆದ್ದಿದ್ದಾರೆ.

ವಿನೋದ್ ನಂಬಿಯಾರ್ ಎಂಬವರೇ ದುಬಾರಿ ಕಾರು ಗೆದ್ದ ಅದೃಷ್ಟವಂತನಾಗಿದ್ದು, ಅವರು 2021 ರ ಅಕ್ಟೋಬರ್ 9 ರಂದು ಖರೀದಿಸಿದ ಟಿಕೆಟ್ ಸಂಖ್ಯೆ 0645 ಗೆ ಬಿಳಿಬಣ್ಣದ ಕಾರು ಲಭಿಸಿದೆ.

ಕತಾರ್ ಬ್ಯಾಂಕ್ ನಲ್ಲಿ ಐಟಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ವಿನೋದ್ ನಿಯಮಿತವಾಗಿ ದುಬೈ ಡ್ಯೂಟಿ ಫ್ರೀ ಡಾದಲ್ಲಿ ಭಾಗವಹಿಸುವವರೂ ಆಗಿದ್ದಾರೆ ಎಂದು ಹೇಳಲಾಗಿದೆ.

ದುಬೈ ಡ್ಯೂಟಿ ಫ್ರೀ ಡ್ರಾದಲ್ಲಿ ಒಟ್ಟು ಐದು ಐಷರಾಮಿ ಕಾರುಗಳನ್ನು ಒಳಗೊಂಡಿದ್ದು, ದುಬೈ ಏರ್ ಶೋನಲ್ಲಿ ಇತ್ತೀಚಿನ ದಿನಗಳಲ್ಲಿ ಮೂರು ದಿನಗಳ ಡ್ರಾ ನಡೆಸಲಾಗುತ್ತಿದೆ.

Join Whatsapp
Exit mobile version