Home ಟಾಪ್ ಸುದ್ದಿಗಳು ಸಿದ್ಧಾಪುರದಿಂದ ರಕ್ಷಣೆ ಮಾಡಿದ ಕೊಳಕುಮಂಡಲ ಹಾವಿನಿಂದ 41 ಮರಿಗಳಿಗೆ ಜನನ

ಸಿದ್ಧಾಪುರದಿಂದ ರಕ್ಷಣೆ ಮಾಡಿದ ಕೊಳಕುಮಂಡಲ ಹಾವಿನಿಂದ 41 ಮರಿಗಳಿಗೆ ಜನನ

ಮಡಿಕೇರಿ: ಕೆಲವು ದಿನಗಳ ಹಿಂದೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಉರಗ ತಜ್ಞ ಸ್ನೇಕ್ ಸುರೇಶ್ ಅವರು ಇಲ್ಇಇಯ ಮೈಸೂರು ರಸ್ತೆ ಬಡಾವಣೆಯಲ್ಲಿ ಕೊಳಕು ಮಂಡಲ ಗರ್ಭಿಣಿ ಹಾವನ್ನು ಜೆಸಿಬಿ ಮುಖಾಂತರ ರಕ್ಷಣೆ ಮಾಡಿದ್ದರು. ಹಾವನ್ನು ಹಿಡಿಯುವ ಸಂದರ್ಭದಲ್ಲಿ ಸಣ್ಣ ಗಾಯವಾಗಿದ್ದರಿಂದ ಸಿದ್ದಾಪುರದ ಸ್ನೇಕ್ ಸುರೇಶ್ ಅವರ ಮನೆಯಲ್ಲಿ ಇರಿಸಿ ಕೆಲವು ದಿನಗಳಕಾಲ ಸ್ನೇಕ್ ಸುರೇಶ್ ಹಾಗೂ ಸ್ನೇಕ್ ನವೀನ್ ರಾಕಿ ಅವರು ಚಿಕಿತ್ಸೆ ನೀಡಿದರು. ಬಳಿಕ ಹಾವು 41 ಮರಿಗಳಿಗೆ ಜನ್ಮ ನೀಡಿದೆ. ಹಾವಿಗೆ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ನೋಡಿಕೊಳ್ಳುವಲ್ಲಿ ತಕ್ಷ ಉರಗ ರಕ್ಷಕರು ತಂಡದ ಸದಸ್ಯರುಗಳು ಯಶಸ್ವಿಯಾಗಿದ್ದಾರೆ.

ಪೊನ್ನಂಪೇಟೆ ನಿವಾಸಿ ಸ್ನೇಕ್ ನವೀನ ರಾಕಿ, ಸ್ನೇಕ್ ವಿನೋದ್ ಬಾವೆ, ಸ್ನೇಕ್ ಮನೋಜ್ ಮತ್ತು ಸ್ನೇಕ್ ರೋಷನ್ ಕೊಳಕು ಮಂಡಲ ಹಾವು ಮತ್ತು 41 ಮರಿಗಳನ್ನು ಅರಣ್ಯ ಅಧಿಕಾರಿ ಉಮಾಶಂಕರ್ ನೇತೃತ್ವದಲ್ಲಿ ತಿತಿಮತಿ ಅರಣ್ಯಕ್ಕೆ ಬಿಡಲಾಯಿತು ಎಂದು ತಕ್ಷ ಉರಗ ರಕ್ಷಕರ ತಂಡದ ಸುರೇಶ್ ಮಾಹಿತಿ ನೀಡಿದರು.

Join Whatsapp
Exit mobile version