ದೆಹಲಿ ರೈತ ಹೋರಾಟವನ್ನು ಮುನ್ನಡೆಸಲಿರುವ 40,000 ನಾರಿಮಣಿಗಳು

Prasthutha|

ಹೊಸದಿಲ್ಲಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ದೆಹಲಿ ಗಡಿಯಲ್ಲಿ ರೈತರ ಹೋರಾಟವನ್ನು ಇಂದು ಮಹಿಳೆಯರು ಮುನ್ನಡೆಸಲಿದ್ದಾರೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ 40,000 ರೈತ ಮಹಿಳೆಯರು ದೆಹಲಿಗೆ ಬರುವ ನಿರೀಕ್ಷೆಯಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಹೆಚ್ಚಿನ ಮಹಿಳೆಯರು ಭಾನುವಾರ ಬೆಳಿಗ್ಗೆಯೇ ದೆಹಲಿಗೆ ಟ್ರಾಕ್ಟರುಗಳಲ್ಲಿ ಪ್ರಯಾಣ ಆರಂಭಿಸಿದ್ದರು. ಇವರಲ್ಲಿ ಕೆಲವು ಸ್ವಯಂ ಟ್ರಾಕ್ಟರ್ ಚಾಲನೆ ಮಾಡುವ ರೈತ ಮಹಿಳೆಯರಿದ್ದರು.

- Advertisement -

“ಇಂದು ಟೋಲ್ ಪ್ಲಾಝಾಗಳಲ್ಲಿ ಅಥವಾ ಎಲ್ಲಾ ಪ್ರತಿಭಟನಾ ಕೇಂದ್ರಗಳಲ್ಲಿ ರೈತರ ಹೋರಾಟವನ್ನು ಮಹಿಳೆಯರು ಮುನ್ನಡೆಸಲಿದ್ದಾರೆ. ಇಂದು ಅವರ ದಿನ ”ಎಂದು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ದೆಹಲಿ ಮತ್ತು ಇತರೆಡೆ ವಿವಿಧ ಪ್ರತಿಭಟನಾ ಸ್ಥಳಗಳಲ್ಲಿ ಹೊಲಗಳಲ್ಲಿ ಪ್ರತಿಭಟನಾಕಾರರಿಗೆ ಅವರು ಆಹಾರವನ್ನು ಬೇಯಿಸುವುದನ್ನು ನೀವು ನೋಡಿರಬಹುದು. ಆದರೆ ಇಂದು, ರೈತ ಚಳವಳಿಯ ಮಹಿಳಾ ಹೋರಾಟಗಾರರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ತಮ್ಮ ಶಕ್ತಿಯನ್ನು ತೋರಿಸಲು ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದಾರೆ ಎಂದು ರೈತ ಸಂಘಟನೆಗಳ ಮುಖಂಡರು ಹೇಳಿದ್ದಾರೆ. ಕೃಷಿ ಮತ್ತು ಜೀವನದಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸಲು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲು ವ್ಯಾಪಕ ವ್ಯವಸ್ಥೆ ಮಾಡಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

Join Whatsapp