Home ಟಾಪ್ ಸುದ್ದಿಗಳು ಗುಜರಾತ್ ನಲ್ಲಿ ಮತ್ತೆ ಕೋಮು ಗಲಭೆ: 40 ಮಂದಿಯ ಬಂಧನ

ಗುಜರಾತ್ ನಲ್ಲಿ ಮತ್ತೆ ಕೋಮು ಗಲಭೆ: 40 ಮಂದಿಯ ಬಂಧನ

ಅಹ್ಮದಾಬಾದ್: ವಡೋದರದ ಸಾವ್ಲಿ ನಗರದ ತರಕಾರಿ ಮಾರುಕಟ್ಟೆಯಲ್ಲಿ ಎರಡು ಸಮುದಾಯಗಳ ನಡುವೆ ಉಂಟಾದ ಗಲಭೆ ಹಬ್ಬದ ಉತ್ಸಾಹದ ಮೇಲೆ ತಣ್ಣೀರು ಎರಚಿದೆ. ಸುಮಾರು 40 ಮಂದಿಯನ್ನು ಬಂಧಿಸಿದ ಪೊಲೀಸರು ಗಲಭೆಯನ್ನು ಹತೋಟಿಗೆ ತಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

“ಮುಸ್ಲಿಮರ ಹಬ್ಬ ಸಮೀಪಿಸುತ್ತಿರುವುದರಿಂದ ಕೆಲವು ಯುವಕರು ಕಂಬವೊಂದರ ಮೇಲೆ ಹಸಿರು ಬಾವುಟ ಹಾರಿಸಿದರು. ಹತ್ತಿರದಲ್ಲೇ ಒಂದು ಮಂದಿರ ಇದ್ದುದರಿಂದ  ಅದು ಎರಡು ಗುಂಪುಗಳ ವಾಗ್ವಾದಕ್ಕೆ ಕಾರಣವಾಯಿತು” ಎಂದು ವಡೋದರ ಗ್ರಾಮೀಣ ಪೊಲೀಸ್ ಠಾಣೆಯ ಆರ್. ಆರ್. ಪಟೇಲ್ ಹೇಳಿದ್ದಾರೆ.

ಧಾರ್ಮಿಕ ನಂಬಿಕೆಯ ವಾಗ್ವಾದವಾಗಿ, ಕೆಲವು ವಾಹನಗಳ ಮೇಲೆ ಕಲ್ಲೆಸೆಯಲಾಗಿದೆ. ಎರಡೂ ಕಡೆಯಿಂದ 40 ಜನರನ್ನು ಬಂಧಿಸಿದ ಪೊಲೀಸರು, ಪರಿಸರದಲ್ಲಿ ಗಸ್ತು ಹೆಚ್ಚಿಸಿದ್ದಾರೆ.

ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಗರ್ಭಾ ಪೆಂಡಾಲ್ ಮೇಲೆ ಯಾರೋ ದಾಳಿ ಮಾಡಿದ್ದಾರೆ. ಮಾತರ್ ತೆಹ್ಸಿಲ್ ನ ಉಂದೇಲ ಗ್ರಾಮದಲ್ಲಿ ಹೆಚ್ಚಿನ ಪೊಲೀಸರನ್ನು ಕೂಡಲೇ ನಿಯೋಜಿಸಲಾಗಿದೆ.

ಖೇಡಾ ಪೊಲೀಸ್ ಸೂಪರಿನ್ ಟೆಂಡೆಂಟ್ ರಾಜೇಶ್ ಗದಿಯಾ ಪ್ರಕಾರ, “ಇಬ್ಬರು ಯುವಕರು ಗರ್ಭಾ ಸ್ಥಳಕ್ಕೆ ನುಗ್ಗಿ ತಕರಾರು ಮಾಡಿದ್ದಾರೆ. ಆರು ಜನರು ಬಳಿಕದ ಕಲ್ಲೆಸೆತದಲ್ಲಿ ಗಾಯಗೊಂಡಿದ್ದಾರೆ. ಕೆಲವರನ್ನು ಬಂಧಿಸಲಾಗಿದೆ. ಪೊಲೀಸ್ ಬಂದೋಬಸ್ತು ಹೆಚ್ಚಿಸಲಾಗಿದೆ.”

ನವರಾತ್ರಿ ಕಾಲದ ಗರ್ಭಾ ನೃತ್ಯ ನಡೆಯುವ ಸ್ಥಳದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಗರ್ಭಾ ಕಾರಣಕ್ಕೆ ಸೂರತ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುವುದಾಗಿ ಡಿಸಿ ಸಂಜಯ್ ವಾಗ್ಮೋರೆ ತಿಳಿಸಿದ್ದಾರೆ.

Join Whatsapp
Exit mobile version