Home ಟಾಪ್ ಸುದ್ದಿಗಳು ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದ ಕಾರು

ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದ ಕಾರು

ಚಿಂತಾಮಣಿ: ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ವೇಳೆ ಕಾರೊಂದು ಹರಿದು 4 ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಚಿಂತಾಮಣಿ ನಗರದ ವಾರ್ಡ್ ನಂ.5 ಅಂಜನಿ ಬಡಾವಣೆ ಯಲ್ಲಿ ನಡೆದಿದೆ.


ಪಾರ್ಕಿಂಗ್ ಮಾಡಲು ಬಂದ  ಕಾರು ಆಟವಾಡುತ್ತಿದ್ದ ಹುಡುಗನ‌ ಮೇಲೆ ಹತ್ತಿದ್ದು, ತಕ್ಷಣವೇ ನಗರದ ಡೆಕ್ಕನ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಮರುಕ್ಷಣವೇ ಕಾರು ಸವಾರ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.


ಮೃತಪಟ್ಟ ಬಾಲಕ ವೆಂಕಟೇಶ್ವರಲು ಅವರ ಪುತ್ರ ಗೀತಿಕ ಎಂದು ತಿಳಿದು ಬಂದಿದೆ. ಮಾಜಿ ಸಚಿವರೊಬ್ಬರ ನಿವಾಸದ ಎದುರೇ ಈ ಘಟನೆ ನಡೆದಿದ್ದು ದ್ರಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ‌ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ‌ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version