Home ಟಾಪ್ ಸುದ್ದಿಗಳು ಈಜಲು ಹೋದ ನಾಲ್ವರು ಬಾಲಕರು ನೀರುಪಾಲು

ಈಜಲು ಹೋದ ನಾಲ್ವರು ಬಾಲಕರು ನೀರುಪಾಲು

ಕಟಕ್: ಶಾಲೆಯಿಂದ ಮರಳಿ ಬಂದ ಬಳಿಕ ಒಟ್ಟಾಗಿ ಈಜಲು ಹೋದ ನಾಲ್ವರು ಬಾಲಕರು ನೀರುಪಾಲಾಗಿರುವ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ ನಡೆದಿದೆ. ಕಟಕ್’ನ ನಯಾಬಝಾರ್ ಪ್ರದೇಶದ ಬಾಲಕರು ಬಡಿಮುಲ್ಲಾ ಘಾಟ್’ನಲ್ಲಿರುವ ಮಹಾನದಿಗೆ ಈಜಲು ತೆರಳಿದ ವೇಳೆ ದುರ್ಘಟನೆ ಸಂಭವಿಸಿದೆ.

ಶುಬಂ ಸೇಥಿ (13) ಕೇತ್ರಬಾಸಿ ಬೆಹರಾ (14) ಆಕಾಶ್ ಬಹಾಲಿಯ (13)  ಹಾಗೂ ಚಂದನ್ ಬೆಹೆರಾ (14) ನೀರು ಪಾಲಾಗಿದ್ದು, ಒಡಿಶಾದ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ನಡೆಸಿದ ನಿರಂತರ ಶೋಧ ಕಾರ್ಯದಲ್ಲಿ ನಾಲ್ವರ ಮೃತದೇಹವನ್ನು ಹೊರ ತೆಗೆಯಲಾಗಿದೆ ಎಂದು ಒಡಿಶಾದ ಡೆಪ್ಯೂಟಿ ಕಮಿಷನರ್ ಪ್ರತೀಕ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಬಾಲಕರು ಶಾಲೆಯಿಂದ ಮಧ್ಯಾಹ್ನವೇ ಮರಳಿದ್ದು, ಮನೆಯಲ್ಲಿ ಊಟ ಮಾಡಿದ ಬಳಿಕ ನಾಲ್ವರು ಒಟ್ಟಾಗಿ ಮನೆಯವರಿಗೆ ತಿಳಿಸದೇ ನದಿಗೆ ಈಜಲು ತೆರಳಿದ್ದರು. ಸಂಜೆ 5 ಗಂಟೆ ಕಳೆದರೂ ಮಕ್ಕಳು ಮನೆಗೆ ಬಾರದ ಹಿನ್ನಲೆಯಲ್ಲಿ ಪೋಷಕರು ಹುಡುಕಾಡ ನಡೆಸಿದ್ದಾರೆ. ಈ ವೇಳೆ ಮಹಾನದಿ ನದಿದಡದಲ್ಲಿ ಬಾಲಕರು ತೆರಳಿದ್ದ ಬೈಸಿಕಲ್ ಪತ್ತೆಯಾಗಿತ್ತು. ಕೂಡಲೇ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದರು.

Join Whatsapp
Exit mobile version