Home ಟಾಪ್ ಸುದ್ದಿಗಳು ಫುಟ್ ಬಾಲ್ ಮೈದಾನದಲ್ಲಿ ಕುಖ್ಯಾತ ರೌಡಿ ಅರವಿಂದ್ ಕೊಲೆ: ರೌಡಿ ಸ್ಟಾಲಿನ್ ಸೇರಿ ನಾಲ್ವರು ಸೆರೆ

ಫುಟ್ ಬಾಲ್ ಮೈದಾನದಲ್ಲಿ ಕುಖ್ಯಾತ ರೌಡಿ ಅರವಿಂದ್ ಕೊಲೆ: ರೌಡಿ ಸ್ಟಾಲಿನ್ ಸೇರಿ ನಾಲ್ವರು ಸೆರೆ

ಬೆಂಗಳೂರು: ಅಶೋಕನಗರದ ಫುಟ್ ಬಾಲ್ ಮೈದಾನದ ಬಳಿ ಹಾಡಹಗಲೇ ಕುಖ್ಯಾತ ರೌಡಿ ಅರವಿಂದ್ ನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ನಾಲ್ವರು ಆರೋಪಿಗಳನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸ್ಟಾಲಿನ್, ವಿಜಯ್, ಅರುಣ್ ಮತ್ತು ಜಾಕ್ ಬಂಧಿತ ಆರೋಪಿಗಳಾಗಿದ್ದು ತಲೆಮರಿಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ.


ಬಂಧಿತ ಸ್ಟಾಲಿನ್ ಪೂರ್ವ ವಿಭಾಗದ ರೌಡಿಯಾಗಿದ್ದು ಪದೇ ಪದೇ ನಮ್ಮ ಮೇಲೆ ರೌಡಿ ಅರವಿಂದ್ ದಾಳಿ ಮಾಡುತ್ತಿದ್ದುದರಿಂದ ಆಕ್ರೋಶಗೊಂಡು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಹಿಂದೆ ಹಲವು ಬಾರಿ ಸ್ಟಾಲಿನ್, ವಿಜಯ್ ಸೇರಿದಂತೆ ಹಲವರ ಮೇಲೆ ಹಲ್ಲೆ ಮಾಡಿದ್ದ ಅರವಿಂದ್ ವಿರುದ್ಧ ಭಾರತಿನಗರ, ಪುಲಕೇಶಿ ನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ.


ಪ್ರಕರಣದಲ್ಲಿ ಪೊಲೀಸರು ಅರವಿಂದನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು ಜಾಮೀನಿನ ಮೇಲೆ ಹೊರಬಂದ ನಂತರ ಮತ್ತೆ ಹಲ್ಲೆ ಮಾಡುತ್ತಿದ್ದ. ಹೀಗಾಗಿ ಅರವಿಂದ್ ಜೈಲಿನಿಂದ ಬಂದಾಗಿನಿಂದ ಕೊಲೆಗೆ ಸಂಚು ರೂಪಿಸಿದ್ದೆವು. ಅರವಿಂದನನ್ನು ಹಾಗೆ ಬಿಟ್ಟರೆ ನಮ್ಮನ್ನು ಬಿಡುವುದಿಲ್ಲ ಎಂದು ಭಾವಿಸಿ ಕೊಲೆ ಮಾಡಿರುವುದಾಗಿ ಆರೋಪಿಗಳು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

Join Whatsapp
Exit mobile version