3ನೇ ಟಿ-20: ಭಾರತದ ವಿರುದ್ಧ ಆಸ್ಟ್ರೇಲಿಯಾಗೆ 5 ವಿಕೆಟ್​ಗಳ ಜಯ

Prasthutha|

ಗುವಾಹಟಿ: ಬರ್ಸಾಪುರ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟಿ-20 ಪಂದ್ಯದಲ್ಲಿ ಆಸೀಸ್​ ಭಾರತದ ವಿರುದ್ಧ 5 ವಿಕೆಟ್​ಗಳ ಜಯ ಸಾಧಿಸಿದೆ.

- Advertisement -

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ಆರಂಭಿಕ ಋತುರಾಜ್​ ಗಾಯಕ್ವಾಡ್ ಅವರ ಸ್ಫೋಟಕ ಬ್ಯಾಟಿಂಗ್ (123 ರನ್, 57 ಎಸೆತ, 13 ಬೌಂಡರಿ, 7 ಸಿಕ್ಸರ್) ಸಹಾಯದಿಂದ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 222 ರನ್​ ಗಳಿಸಿತ್ತು.

ಆದರೆ ಭಾರತ ನೀಡಿದ 223 ರನ್​ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಅಮೋಘ ಶತಕದ (104 ರನ್, 48 ಎಸೆತ, 8 ಬೌಂಡರಿ, 8 ಸಿಕ್ಸರ್) ಫಲವಾಗಿ 5 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ ಗೆಲುವಿನ ನಗೆ ಬೀರಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಜಯ ತನ್ನದಾಗಿಸಿಕೊಂಡಿದೆ.

- Advertisement -

ಭಾರತದ ಪರ ರವಿ ಬಿಷ್ನೋಯಿ (4-0-32-2), ಆವೇಶ್​ ಖಾನ್ (4-0-37-1), ಅಕ್ಷರ್​ ಪಟೇಲ್ (4-0-37-1), ಅರ್ಷ್​ದೀಪ್​ ಸಿಂಗ್ (4-0-44-1), ಪ್ರಸಿದ್ಧ್​​ ಕೃಷ್ಣ (4-0-68-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.



Join Whatsapp
Exit mobile version