Home ಟಾಪ್ ಸುದ್ದಿಗಳು 382 ಅಪರಾಧ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಕೊಡಗಿನ ‘ಲಿಯೋ’ ಮರಣ

382 ಅಪರಾಧ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಕೊಡಗಿನ ‘ಲಿಯೋ’ ಮರಣ

ಮಡಿಕೇರಿ: ಸುಮಾರು 382 ಅಪರಾಧ ಪ್ರಕರಣಗಳಲ್ಲಿ ಪೊಲೀಸರ ಜೊತೆ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಕೊಡಗು ಜಿಲ್ಲಾ ಪೊಲೀಸ್ ಘಟಕದ ಶ್ವಾನ ದಳ ವಿಭಾಗದ ‘ಲಿಯೋ’ ಮೃತಪಟ್ಟಿದೆ.

2013 ಫೆಬ್ರವರಿ 26ರಿಂದ‌ ಕೊಡಗು ಪೊಲೀಸರ ಜೊತೆ ಸೇವೆ ಸಲ್ಲಿಸಲು ಆರಂಭಿಸಿದ ಲಿಯೋ ಒಟ್ಟು 10 ವರ್ಷ 9 ತಿಂಗಳ ಕಾಲ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ 2023 ನ.17 ರಂದು ರಂದು ಸೇವೆಯಿಂದ ನಿವೃತ್ತಿಯನ್ನು ಹೊಂದಿತ್ತು.

ತನ್ನ ಸೇವಾ ಅವಧಿಯಲ್ಲಿ ವಿವಿಧ ಪೊಲೀಸ್ ಠಾಣೆಯಲ್ಲಿ ವರದಿಯಾದ ಕ್ಲಿಷ್ಟಕರ ಪ್ರಕರಣಗಳ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು.

ಒಟ್ಟು 382 ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಲಿಯೋ 46 ಅಪರಾಧಿಗಳನ್ನು ಪತ್ತೆ ಮಾಡಿದೆ. 22 ಪ್ರಕರಣಗಳಲ್ಲಿ ಅಪರಾಧಿಗಳ ಸುಳಿವು ನೀಡಿದೆ. ಅಲ್ಲದೆ, 2018 ನೇ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಭೂಕಸಿತದಿಂದ ನಾಪತ್ತೆಯಾದ ನಾಲ್ವರ ಮೃತ ದೇಹಗಳನ್ನು ಪತ್ತೆ ಮಾಡಿತ್ತು.

ಮಾತ್ರವಲ್ಲದೆ, ಚೆಕ್ ಪೋಸ್ಟ್‌ಗಳಲ್ಲಿ ನಿಷೇಧಿತ ಮಾದಕ ವಸ್ತುಗಳ ಸಾಗಾಟ ಪ್ರಕರಣವನ್ನು ಬಯಲಿಗೆಳೆದಿದೆ.
ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 3 ಬಾರಿ ಹಾಗೂ ವಲಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 4 ಬಹುಮಾನವನ್ನು ಗೆದ್ದಿತ್ತು.

Join Whatsapp
Exit mobile version