Home ಟಾಪ್ ಸುದ್ದಿಗಳು ತೃಣಮೂಲ ಕಾಂಗ್ರೆಸಿನ 38 ಶಾಸಕರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ: ನಟ ಮಿಥುನ್‌ ಚಕ್ರವರ್ತಿ

ತೃಣಮೂಲ ಕಾಂಗ್ರೆಸಿನ 38 ಶಾಸಕರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ: ನಟ ಮಿಥುನ್‌ ಚಕ್ರವರ್ತಿ

ಕೋಲ್ಕತ್ತ: ನಾನು ನಿಮಗೆ ಬ್ರೇಕಿಂಗ್‌ ನ್ಯೂಸ್‌ ನೀಡುವ ಸಮಯ ಬಂದಿದೆ. ಟಿಎಂಸಿಯ 38 ಶಾಸಕರು ನಮ್ಮ ಸಂಪರ್ಕದಲ್ಲಿದ್ದು, 21 ಶಾಸಕರು ನೇರ ಸಂಪರ್ಕದಲ್ಲಿದ್ದಾರೆ ಎಂದು ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಹೇಳಿದ್ದಾರೆ.

ಮೋದಿ ಮತ್ತು ಅಮಿತ್ ಶಾ ಟೀಮಿನ ಗರ್ವಭಂಗಗೊಳಿಸಿ ಎರಡನೇ ಬಾರಿಗೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ ಮಮತಾ ಬ್ಯಾನರ್ಜಿ ಮೇಲೆ ಬಿಜೆಪಿ ಅಪರೇಷನ್ ಕಮಲ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ, ಪಶ್ಚಿಮ ಬಂಗಾಳದಲ್ಲಿ ಆಪರೇಷನ್‌ ಕಮಲ ನಡೆಯುವ ಸಾಧ್ಯತೆಗಳಿವೆ ಎಂದು ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡಿದ್ದವು.

ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ನಾಯಕ ಹಾಗೂ ನಟ ಮಿಥುನ್‌ ಚಕ್ರವರ್ತಿ, ನಮ್ಮೊಂದಿಗೆ ತೃಣಮೂಲ ಕಾಂಗ್ರೆಸ್‌ ಪಕ್ಷದ ಬರೊಬ್ಬರಿ 38 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.

Join Whatsapp
Exit mobile version