Home ಟಾಪ್ ಸುದ್ದಿಗಳು ಕುವೆಂಪು ವಿವಿ ಘಟಿಕೋತ್ಸವ: 3 ಸ್ವರ್ಣ ಪದಕ, ನಗದು ಬಹುಮಾನ ಪಡೆದ ಗಜಾಲ ಹಫೀಜ್

ಕುವೆಂಪು ವಿವಿ ಘಟಿಕೋತ್ಸವ: 3 ಸ್ವರ್ಣ ಪದಕ, ನಗದು ಬಹುಮಾನ ಪಡೆದ ಗಜಾಲ ಹಫೀಜ್

ಶಿವಮೊಗ್ಗ: ಚಿಕ್ಕಮಗಳೂರಿನ ಬಿ.ಇಡಿ ವಿದ್ಯಾರ್ಥಿನಿ ಗಜಾಲ ಹಫೀಜ್ ಪ್ರಥಮ ರ್ಯಾಂಕ್ ಪಡೆದು ಮೂರು ಚಿನ್ನದ ಪದಕ ಮತ್ತು ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.

ಕಳೆದ ಶನಿವಾರ ಕುವೆಂಪು ವಿಶ್ವವಿದ್ಯಾನಿಲಯದ 33ನೇ ವರ್ಷದ ಘಟಿಕೋತ್ಸದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗಜಾಲ ಹಫೀಜ್ ಅವರಿಗೆ ಪದವಿ ಪ್ರದಾನ ಮಾಡಿದರು.

ಗಜಾಲ ಹಫೀಜ್ ಅವರು ಜಾನುವಾರು ಅಭಿವೃದ್ಧಿ ಅಧಿಕಾರಿ ಕೆ. ಅಜೀಜ್ ಅಹಮದ್ ಖಾನ್ ಅವರ ಪುತ್ರಿಯಾಗಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಪದ್ಮಭೂಷಣ, ಪದ್ಮ ವಿಭೂಷಣ, ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕುಲಾಧಿಪತಿಗಳಾದ ಡಾ.ಸುರೇಶ್ ಬಿ.ಎಸ್ ಅವರು ಘಟಿಕೋತ್ಸವ ಭಾಷಣ ಮಾಡಿದರು. ಈ ವೇಳೆ ಕುಲಪತಿಗಳಾದ ಪ್ರೊ.ವೀರಭದ್ರಪ್ಪ, ಕುಲಸಚಿವರಾದ ಗೀತ, ಮೌಲ್ಯಮಾಪನ ಕುಲಸಚಿವರಾದ ನವೀನ್ ಸೇರಿದಂತೆ ಸಿಂಡಿಕೇಟ್ ಸದಸ್ಯರು ಹಾಜರಿದ್ದರು.

Join Whatsapp
Exit mobile version