ನವದೆಹಲಿ: ದೇಶದಲ್ಲಿ ಕೋವಿಡ್ ನಾಲ್ಕನೇ ಅಲೆ ಪ್ರರಾಂಭಗೊಂಡಿದೆ ಎಂದು ತಜ್ಞರ ಹೇಳಿಕೆ ಮಧ್ಯೆ ಕಳೆದ 24ಗಂಟೆಗಳಲ್ಲಿ ಒಟ್ಟು 3,377 ಹೊಸ ಪ್ರಕರಣಗಳು ಪತ್ತೆಯಾಗಿದೆ. 60 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.
ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 17,801ಕ್ಕೆ ಏರಿಕೆಯಾಗಿದ್ದು, ಗುರುವಾರ 3,303 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿತ್ತು. ಗುರುವಾರ 22,80,743 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ಈವರೆಗೆ ಒಟ್ಟು 1,88,65,46,894 ಡೋಸ್ ಲಸಿಕೆ ಹಾಕಲಾಗಿದೆ.