ದ.ಕ.ಜಿಲ್ಲೆಯಲ್ಲಿ ಮತ್ತೆ 32 ವಿದ್ಯಾರ್ಥಿಗಳು, 7 ಮಂದಿ ಶಿಕ್ಷಕರಲ್ಲಿ ಕೋವಿಡ್ ಪಾಸಿಟಿವ್: 10 ಶಾಲೆ ಬಂದ್

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 32 ವಿದ್ಯಾರ್ಥಿಗಳಲ್ಲಿ ಹಾಗೂ 7 ಮಂದಿ ಶಿಕ್ಷಕರಲ್ಲಿ ಕೋವಿಡ್ ಸೋಂಕು ಕಂಡುಬಂದಿದ್ದು, ಇದುವರೆಗೆ 10 ಶಾಲೆಗಳನ್ನು ಮುಚ್ಚಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೆ 288 ವಿದ್ಯಾರ್ಥಿಗಳಲ್ಲಿ ಹಾಗೂ 43 ಮಂದಿ ಶಿಕ್ಷಕರಲ್ಲಿ ಸೋಂಕು ಕಂಡುಬಂದಿದೆ.
ಗುರುವಾರ ಮಂಗಳೂರು ಉತ್ತರದ ಸೈಂಟ್ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಓರ್ವ ವಿದ್ಯಾರ್ಥಿಗೆ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಆ ತರಗತಿ ಮಾತ್ರ ಮುಚ್ಚಲಾಗಿದೆ. ಮಂಗಳೂರು ದಕ್ಷಿಣದ ಪೆರ್ಮನ್ನೂರಿನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಐವರು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಿದೆ. ತರಗತಿಗಳನ್ನು ಒಂದು ವಾರ ಕಾಲ ಮುಚ್ಚಿ ಆನ್ ಲೈನ್ ತರಗತಿ ನಡೆಸಲಾಗುತ್ತಿದೆ.
ಪುತ್ತೂರು ತಾಲೂಕಿನ ಉದನೆ ಬಿಷಪ್ ಪೋಲಿಕಾರ್ಷಸ್ ಪಬ್ಲಿಕ್ ಶಾಲೆಯ ಆರು ಮಕ್ಕಳು ಮತ್ತು ಓರ್ವ ಶಿಕ್ಷಕರಲ್ಲಿ ಸೋಂಕು ಕಂಡುಬಂದಿದೆ. ಅದೇ ರೀತಿ ಶಿರಾಡಿಯ ಸೈಂಟ್ ಆಂಟೋನಿ ಪ್ರೌಢ ಶಾಲೆಯ ಮೂವರು, ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಆರು ಮಕ್ಕಳಲ್ಲಿ ಸೋಂಕು ಕಂಡುಬಂದಿದೆ.
ಗುರುವಾರದವರೆಗೆ ಬಂಟ್ವಾಳದಲ್ಲಿ 8 ಮಕ್ಕಳು ಹಾಗೂ ಇಬ್ಬರು ಶಿಕ್ಷಕರು, ಬೆಳ್ತಂಗಡಿಯ ಇಬ್ಬರು ವಿದ್ಯಾರ್ಥಿಗಳು, ಮಂಗಳೂರು ಉತ್ತರದ ಐವರು ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು, ಮಂಗಳೂರು ದಕ್ಷಿಣದಲ್ಲಿ ಇಬ್ಬರು ವಿದ್ಯಾರ್ಥಿಗಳು, ಪುತ್ತೂರು 9 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು, ಸುಳ್ಯದಲ್ಲಿ ತಲಾ ಓರ್ವ ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಸೋಂಕು ಕಂಡುಬಂದಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಇಂದು 32 ವಿದ್ಯಾರ್ಥಿಗಳಲ್ಲಿ ಹಾಗೂ 7 ಮಂದಿ ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ.



Join Whatsapp