ನವದೆಹಲಿ: ಪ್ರಸಕ್ತ ಸಾಲಿನ UPSC ಮುಖ್ಯ ಪರೀಕ್ಷೆಯಲ್ಲಿ 31 ಮುಸ್ಲಿಮ್ ಅಭ್ಯರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 2020 – 2023 ಸಾಲಿಗೆ ನಡೆದ ಪರೀಕ್ಷೆಯಲ್ಲಿ ಸದಾಫ್ ಚೌಧರಿ ಮುಸ್ಲಿಮ್ ಅಭ್ಯರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಒಟ್ಟು 761 ಮಂದಿ ಮುಸ್ಲಿಮ್ ಅಭ್ಯರ್ಥಿಗಳ ಪೈಕಿ 31 ಮಂದಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾಗಿ ದೇಶದ ಗಮನ ಸೆಳೆದಿದ್ದಾರೆ. ಕಳೆದ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ 2019 ರ ಬ್ಯಾಚಿಗೆ 42 ಮಂದಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು.
ಪ್ರಸಕ್ತ ಸಾಲಿನ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಐಐಟಿ ಬಾಂಬೆ ಪದವೀಧರರಾದ ಶುಭಂ ಕುಮಾರ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರು ತಮ್ಮ ಮೂರನೇ ಪ್ರಯತ್ನದಲ್ಲಿ ಈ ಸ್ಥಾನವನ್ನು ಸಾಧಿಸಿದರು. ಜಾಗೃತಿ ಅವಸ್ಥಿ ಮತ್ತು ಅಂಕಿತ ಜೈನ್ ಕ್ರಮವಾಗಿ ದ್ವಿತೀಯ ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
UPSC 2020 ಸಾಲಿಗೆ ಆಯ್ಕೆಯಾದ ಮುಸ್ಲಿಂ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿವೆ.
1) 23 ಸದಾಫ್ ಚೌಧರಿ 2) 58 ಫೈಜಾನ್ ಅಹ್ಮದ್ 3) 63 ಧೀನ ದಸ್ತಗೀರ್ 4) 125 ಎಂಡಿ ಮಂಜಾರ್ ಹುಸೇನ್ 5) 129 ಶಾಹಿದ್ ಅಹ್ಮದ್ 6) 142 ಶಹನ್ಸಾ ಕೆ ಎಸ್ 7) 203 ಮುಹಮ್ಮದ್ ಆಕ್ವಿಬ್ 8) 217 ಶಹನಾಜ್ I 9) 225 ವಸೀಮ್ ಅಹ್ಮದ್ ಭಟ್ 10) 234 ಬುಶಾರ ಬಾನೊ 11) 270 ಎಂಡಿ ಹಾರಿಸ್ ಸುಮೈರ್ 12) 282 ಅಲ್ಟಮಶ್ ಘಾಜಿ 13) 283 ಅಹ್ಮದ್ ಎಚ್. ಚೌಧರಿ 14) 316 ಸಾರಾ ಅಶ್ರಫ್ 15) 389 ಮೊಹಿಬುಲ್ಲಾ ಅನ್ಸಾರಿ 16) 403 ಅನೀಝ್ ಎಸ್ 17) 423 ಜೆಬಾ ಖಾನ್ 18) 447 ಫೈಸಲ್ ರಾಜಾ 19) 450 ಎಸ್ ಮುಹ್ಮದ್ ಯಾಕೂಬ್ 20) 470 ಸಬೀಲ್ ಪೂವಕುಂದಿಲ್ 21) 478 ರೆಹಾನ್ ಖಾತ್ರಿ 22) 493 ಮುಹ್ಮದ್ ಜಾವೇದ್ ಎ 23) 545 ಅಲ್ತಾಫ್ ಮಹದ್. ಶೇಖ್ 24) 558 ಖಾನ್ ಆಸೀಮ್ ಕಿಫಾಯತ್ 25) 569 ಸೈಯದ್ ಜಹೆದ್ ಅಲಿ 26) 583 ಶಕೀರಹ್ಮದ್ ತೊಂಡಿಖಾನ್ 27) 589 ಮುಹಮದ್ ರಿಸ್ವಿನ್ 28) 597 ಮುಹಮ್ಮದ್ ಸಾಹಿದ್ 29) 611 ಇಕ್ಬಾಲ್ ರಸೂಲ್ ದಾರ್ 30) 625 ಅಮೀರ್ ಬಶೀರ್ 31) 738 ಮಜೀದ್ ಇಕ್ಬಾಲ್ ಖಾನ್.