ಅಪ್ರಾಪ್ತ ಬಾಲಕಿಯನ್ನು ಸ್ಪರ್ಶಿಸಿ ಆಕೆಯನ್ನು ‘ಹಾಟ್’ ಎಂದು ಕರೆದ ವ್ಯಕ್ತಿಗೆ 3 ವರ್ಷಗಳ ಜೈಲುಶಿಕ್ಷೆ

Prasthutha|

ಮುಂಬೈ: ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿ ಆಕೆಯನ್ನು ‘ಹಾಟ್’ ಎಂದು ಕರೆದಿದ್ದಕ್ಕಾಗಿ 50 ವರ್ಷದ ವ್ಯಕ್ತಿಗೆ ವಿಶೇಷ ಪೋಕ್ಸೊ
ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ವ್ಯಕ್ತಿಯ ವರ್ತನೆ ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶದ್ದು ಎಂದು ನ್ಯಾಯಾಲಯ ಹೇಳಿದೆ.

- Advertisement -

ಪ್ರಕರಣವು ಮೇ 24, 2016 ರಂದು ನಡೆದಿದ್ದು, ಹುಡುಗಿಗೆ ಆಗ 13 ವರ್ಷ ವಯಸ್ಸಾಗಿತ್ತು. ಆಕೆ ಮಸೀದಿಯೊಂದರ ಬಳಿ ನಿಂತಿದ್ದಾಗ ವ್ಯಕ್ತಿ ಆಕೆಯನ್ನು ಸೂಕ್ತವಲ್ಲದ ಸ್ಥಳದಲ್ಲಿ ಸ್ಪರ್ಶಿಸಿ “ಹಾಟ್ ಹುಡುಗಿ” ಎಂದು ಹೇಳಿದ್ದನು ಎಂದು ನ್ಯಾಯಾಲಯ ಹೇಳಿದೆ.



Join Whatsapp