ಜೆಮ್ಶೆಡ್ ಪುರ: ಜೆಮ್ಶೆಡ್ ಪುರದ ಟಾಟಾ ಸ್ಟೀಲ್ ಸ್ಥಾವರದಲ್ಲಿ ಫೌಲ್ ಗ್ಯಾಸ್ ಪೈಪ್ ಲೈನ್ ಸ್ಫೋಟಗೊಂಡು ಕನಿಷ್ಠ ಮೂವರು ಗಾಗಗೊಂಡಿದ್ದಾರೆ.
ಘಟನೆಯಲ್ಲಿನ ಗಾಯಾಳುಗಳನ್ನು ಸ್ಥಳಾಂತರಿಸಲು ಮತ್ತು ಸಾಧ್ಯವಾದಷ್ಟು ಚಿಕಿತ್ಸೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಟಾಟಾ ಸ್ಟೀಲ್ ಅಧಿಕಾರಿಗಳು ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.