Home ಟಾಪ್ ಸುದ್ದಿಗಳು ಜೆಡಿಎಸ್’ಗೆ ಬಿಗ್ ಶಾಕ್: ಮಂಡ್ಯದ 3 ಮಾಜಿ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆ

ಜೆಡಿಎಸ್’ಗೆ ಬಿಗ್ ಶಾಕ್: ಮಂಡ್ಯದ 3 ಮಾಜಿ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆ

ಬೆಂಗಳೂರು: ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್ ಗೆ ಭಾರೀ ಹಿನ್ನಡೆಯಾಗಿದ್ದು, ಮಂಡ್ಯ ಭಾಗದ ಜೆಡಿಎಸ್ ನ ಮಾಜಿ ಮೂವರು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.


ಮಾಜಿ ಎಂಎಲ್ ಸಿ ಮರಿ ತಿಬ್ಬೇಗೌಡ, ಮಾಜಿ ಶಾಸಕ ಎಂ. ಶ್ರೀನಿವಾಸ್, ಮಾಜಿ ಎಂಎಲ್ ಸಿ ಅಪ್ಪಾಜಿ ಗೌಡ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾದರು.

ಇದೇ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಮರಿತಿಬ್ಬೇಗೌಡಗೆ ಬಹಳ ದಿನಗಳಿಂದ ಗಾಳ ಹಾಕ್ತಾ ಇದ್ದೆ, ಆದರೆ ಸಿಕ್ಕಿರಲಿಲ್ಲ. ಇವಾಗ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜೆಡಿ ಎಸ್ ಗೆ ದೊಡ್ಡ ಅಡಿಪಾಯ ಆಗಿದ್ದವರು ಮರಿತಿಬ್ಬೇಗೌಡರು ಎಂದರು.

Join Whatsapp
Exit mobile version