ಚಿತ್ರದುರ್ಗ: ಅಕ್ರಮವಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರೋಪ ಕೇಳಿಬಂದ ಹಿನ್ನೆಲೆ ಹೊಸದುರ್ಗದ 3 ಸೈಬರ್ ಸೆಂಟರ್ಗಳ ಮೇಲೆ ತಹಶೀಲ್ದಾರ್ ಪುಟ್ಟರಾಜಗೌಡ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಗ್ರಾಮ ಒನ್, ಕರ್ನಾಟಕ ಒನ್ ಲಾಗಿನ್ ಐಡಿ ದುರ್ಬಳಕೆ ಆರೋಪ ಹಿನ್ನೆಲೆ ಜನಸ್ನೇಹಿ, ಸ್ಫೂರ್ತಿ, ವೈಷ್ಣವಿ ಸೈಬರ್ ಕೇಂದ್ರಗಳನ್ನು ಸೀಜ್ ಮಾಡಲಾಗಿದೆ. ಲಾಗಿನ್ ಐಡಿ ನೀಡಿದವರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.