ರಮಝಾನ್ ಉಪವಾಸ ಮುಗಿಸಿ ನದಿಯಲ್ಲಿ ಈಜಲು ಹೋದ 3 ಬಾಲಕರು ಮೃತ

Prasthutha|

ತೀರ್ಥಹಳ್ಳಿ: ರಮಝಾನ್ ಉಪವಾಸ ವೃತ ಮುಗಿಸಿದ ಮೂವರು ಎಸ್‌ಎಸ್ಎಲ್ ಸಿ ವಿದ್ಯಾರ್ಥಿಗಳು‌ ನದಿಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆ ತೀರ್ಥಹಳ್ಳಿ ತುಂಗಾ ನದಿಯಲ್ಲಿ ನಡೆದಿದೆ.

- Advertisement -

ರಫನ್, ಇಯಾನ್ ಹಾಗೂ ಅರ್ಷದ್ ಮೃತ ಬಾಲಕರು. ಸೋಮವಾರ ಸಂಜೆ ರಾಮ ಮಂಟಪದ ಪಕ್ಕ ಈ ಘಟನೆ ನಡೆದಿದೆ.
ಮೂವರು ಬಾಲಕರು ಉಪವಾಸ ಮುಗಿಸಿದ ಬಳಿಕ ಈಜುವುದಕ್ಕೆ ರಾಮ ಮಂಟಪದ ಪಕ್ಕ ತುಂಗಾ ನದಿಗೆ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ನೀರಿನಲ್ಲಿ ಸತತವಾಗಿ ಒಂದು ಘಂಟೆಯಿಂದ ಅಗ್ನಿಶಾಮಕದಳದವರು ಮತ್ತು ಸ್ಥಳೀಯರು ಸೇರಿ ಹುಡುಕಾಟ ನಡೆಸಿದ್ದ ಬಳಿಕ ಕೊನೆಗೆ ಮೂವರ ಶವ ಪತ್ತೆಯಾಗಿದೆ.



Join Whatsapp