Home ಟಾಪ್ ಸುದ್ದಿಗಳು 2020 ರಲ್ಲಿ ಭಾರತೀಯ ಮಹಿಳೆಯರ ವಿರುದ್ಧ 3.71 ಲಕ್ಷ ಅಪರಾಧ ಪ್ರಕರಣ ದಾಖಲು

2020 ರಲ್ಲಿ ಭಾರತೀಯ ಮಹಿಳೆಯರ ವಿರುದ್ಧ 3.71 ಲಕ್ಷ ಅಪರಾಧ ಪ್ರಕರಣ ದಾಖಲು

ನವದೆಹಲಿ: ಭಾರತದಾದ್ಯಂತ 2020 ರಲ್ಲಿ ಮಹಿಳೆಯರ ಮೇಲೆ 3,71,503 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ವರದಿಯ ಆಧಾರದಲ್ಲಿ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ.

ಮಹಿಳೆಯರ ವಿರುದ್ಧದ ಅಪರಾಧಕ್ಕಾಗಿ 3,98,620 ಮಂದಿಯನ್ನು ಬಂಧಿಸಲಾಗಿದ್ದು, ಸುಮಾರು 4,88,143 ಮಂದಿಯನ್ನು ಚಾರ್ಜ್ ಶೀಟ್ ಮಾಡಲಾಗಿದೆ ಮತ್ತು 31,402 ಮಂದಿಗೆ ಶಿಕ್ಷೆ ವಿಧಿಸಿರುವುದು ಅಪರಾಧ ದಾಖಲೆ ಬ್ಯೂರೋದ ವರದಿಯಿಂದ ಬಹಿರಂಗವಾಗಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ರಾಜ್ಯಸಭೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದ ಜರ್ನಾ ದಾಸ್ ಬೈದ್ಯ ಅವರು ಕೇಳಿದ ಪ್ರಶ್ನೆಗೆ ಈ ಮೇಲಿನ ಅಂಕಿಅಂಶಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಭಾರತದಲ್ಲಿ ದಾಖಲಾದ ಹೆಚ್ಚಿನ ಪ್ರಕರಣಗಳ ಪೈಕಿ ಶೇಕಡಾ 30 ರಷ್ಟು ಗಂಡ ಅಥವಾ ಆತನ ಸಂಬಂಧಿಕರ ಕ್ರೌರ್ಯಕ್ಕೆ ಸಂಬಂಧಿಸಿವೆ. ಮಾತ್ರವಲ್ಲ ಶೇಕಡಾ 23 ರಷ್ಟು ಅಪರಾಧಗಳಲ್ಲಿ ಹೆಣ್ಣಿನ ವಿನಯತೆಗಾಗಿ ಹಲ್ಲೆ ನಡೆದಿದೆ ಎಂದು NCRC ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳಿಸಿದ ವರದಿಯಲ್ಲಿ ಉಲ್ಲೇಖಿಸಿದೆ.

2020 ರ ಸಾಲಿನಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ 49,385 ಪ್ರಕರಣಗಳನ್ನು ಪತ್ತೆಯಾಗಿದೆ. ಇದು ದೇಶದಲ್ಲೇ ಅತೀ ಹೆಚ್ಚು ಪ್ರಕರಣ ಎಂದು NCRC ತನ್ನ ವರದಿಯಲ್ಲಿ ಬಹಿರಂಗಪಡಿಸಿವೆ.

Join Whatsapp
Exit mobile version