ಬೆಂಗಳೂರು: 2023-24 ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.
ಮಂಡಳಿಯಿಂದ ಪ್ರಕಟಿಸಿರುವ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಇಂದಿನಿಂದ ಡಿಸೆಂಬರ್ 15 ರವರೆಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಯನ್ನು ಮಂಡಳಿಯ ಇಮೇಲ್ ವಿಳಾಸ chairpersonkseab@gmail.com ಹಾಗೂ ಹಾರ್ಡ್ ಪ್ರತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-1ರ ವೇಳಾಪಟ್ಟಿ:
02.03.2024 – ಕನ್ನಡ 04.03.2023 – ಇತಿಹಾಸ, ಭೌತಶಾಸ್ತ್ರ 06.03.2023 – ಸಮಾಜ ಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನಶಾಸ್ತ್ರ 07.03.2023 – ಹಿಂದಿ 09.03.2023 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ 11.03.2023 – ಇಂಗ್ಲಿಷ್ 13.03.2023 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ 16.03.2023 – ಭೂಗೋಳಶಾಸ್ತ್ರ, ಜೀವಶಾಸ್ತ್ರ 18.03.2023 – ರಸಾಯನಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ 20.03.2023 – ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ 22.03.2023 – ಅರ್ಥಶಾಸ್ತ್ರ
ಎಸ್ಎಸ್ಎಲ್ಸಿ ಪರೀಕ್ಷೆ -1ರ ವೇಳಾಪಟ್ಟಿ:
25.03.2023 – ಪ್ರಥಮ ಭಾಷೆ ಕನ್ನಡ 27.03.2023 – ಸಮಾಜ ವಿಜ್ಞಾನ 30.03.2023 – ವಿಜ್ಞಾನ 02.04.2023 – ಗಣಿತ 04.04.2023 – ತೃತೀಯ ಭಾಷೆ ಹಿಂದಿ 06.04.2023 – ದ್ವಿತೀಯ ಭಾಷೆ ಇಂಗ್ಲಿಷ್