Home ಟಾಪ್ ಸುದ್ದಿಗಳು ದ್ವಿತೀಯ ಪಿಯುಸಿ ಪರೀಕ್ಷೆ; ನಕಲಿ ಅಭ್ಯರ್ಥಿಗಳು ಪೊಲೀಸ್ ವಶ

ದ್ವಿತೀಯ ಪಿಯುಸಿ ಪರೀಕ್ಷೆ; ನಕಲಿ ಅಭ್ಯರ್ಥಿಗಳು ಪೊಲೀಸ್ ವಶ

ಕಲಬುರಗಿ: ರಾಜ್ಯಾದ್ಯಂತ ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆ ಬರೆಯಲು ಆಗಮಿಸಿದ ನಕಲಿ ಅಭ್ಯರ್ಥಿಗಳು  ಪೊಲೀಸರ ಅತಿಥಿಗಳಾದ ಘಟನೆ  ಆಳಂದ ತಾಲೂಕಿನಲ್ಲಿ ನಡೆದಿದೆ.

ಮಾದನ ಹಿಪ್ಪರಗಾ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ಕೇಂದ್ರದಲ್ಲಿ ಇಬ್ಬರು ಮಾತ್ರ ಪರೀಕ್ಷೆ ಬರೆಯುತ್ತಿದ್ದರು. ಬೆಳಿಗ್ಗೆ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಇಬ್ಬರೂ ನಕಲಿ ಅಭ್ಯರ್ಥಿಗಳು ಎಂಬುದು ಬೆಳಕಿಗೆ ಬಂತು. ತಕ್ಷಣವೇ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಲಾಯಿತು.

ಪಟ್ಟಣದ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ 85 ಪೈಕಿ 75 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ನಕಲು ಮಾಡುತ್ತಿದ್ದ ನಾಲ್ವರನ್ನು ವಿಶೇಷ ಜಾಗೃತದಳ ಅಧಿಕಾರಿಗಳು ಪರೀಕ್ಷಾ ಕೇಂದ್ರದಿಂದ ಹೊರಹಾಕಿದ್ದಾರೆ.

Join Whatsapp
Exit mobile version