Home ಟಾಪ್ ಸುದ್ದಿಗಳು ಕಾಶ್ಮೀರ ವ್ಯಕ್ತಿಯ ಕಸ್ಟಡಿ ಹತ್ಯೆ: 25 ವರ್ಷಗಳ ಬಳಿಕ ಮರು ತನಿಖೆಗೆ ಕೋರ್ಟ್ ಆದೇಶ

ಕಾಶ್ಮೀರ ವ್ಯಕ್ತಿಯ ಕಸ್ಟಡಿ ಹತ್ಯೆ: 25 ವರ್ಷಗಳ ಬಳಿಕ ಮರು ತನಿಖೆಗೆ ಕೋರ್ಟ್ ಆದೇಶ

ಅನಂತನಾಗ್: ಕಣಿವೆ ರಾಜ್ಯ ಕಾಶ್ಮೀರದಲ್ಲಿ ವ್ಯಕ್ತಿಯೊಬ್ಬರ ಕಸ್ಟಡಿ ಹತ್ಯೆಗೆ ಸಂಬಂಧಿಸಿದಂತೆ 25 ವರ್ಷಗಳ ಬಳಿಕ ಮರು ವಿಚಾರಣೆಗೆ ನ್ಯಾಯಾಲಯ ಆದೇಶ ನೀಡಿದೆ.

ಮೇ 31, 1996 ರಂದು ಕಾಶ್ಮೀರ ನಿವಾಸಿ ರಂಝಾನ್ ಭಟ್ ಎಂಬಾತನನ್ನು ಪೊಲೀಸ್ ಪಡೆ ಹತ್ಯೆ ನಡೆಸಿದೆ ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಆತನ ಪತ್ನಿ ಜಮೀಲ ಭಟ್, ಕಳೆದ 25 ವರ್ಷಗಳಿಂದ ಪೊಲೀಸ್ ಅಧಿಕಾರಿಗಳ ಮುಂದೆ ನೂರಾರು ಬಾರಿ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಮಾತ್ರವಲ್ಲ ತನ್ನ ಪತಿಯ ಹತ್ಯೆಗೆ ನ್ಯಾಯ ಒದಗಿಸುವಂತೆ ಮೊರೆಯಿಡುತ್ತಲೆ ಇದ್ದರು.

ಮಾತ್ರವಲ್ಲ ರಂಝಾನ್ ಭಟ್ ಎನ್ ಕೌಂಟರ್ ನಲ್ಲಿ ಕೊಲ್ಲಲಾಗಿದೆ ಎಂದು ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಿರುವುದು ವಿಶೇಷ.
ಈ ಮಧ್ಯೆ ರಂಝಾನ್ ಭಟ್ ಕಸ್ಟಡಿ ಹತ್ಯಾ ಪ್ರಕರಣವನ್ನು ಕೈಬಿಡುವಂತೆ ಕೋರಿ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ಶ್ರೀನಗರ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿತ್ತು. ಮಾತ್ರವಲ್ಲ ಈ ಪ್ರಕರಣವನ್ನು ರದ್ದುಗೊಳಿಸದಂತೆ ರಂಝಾನ್ ಕುಟುಂಬ ಏಪ್ರಿಲ್ 1 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಪ್ರಕರಣ ಮರು ತನಿಖೆ ನಡುಸುವಂತೆ ಸಿಟ್ ಗೆ ಆದೇಶ ನೀಡಿದೆ.

ಸತ್ಯ ಎಂದಿಗೂ ಸಾಯುವುದಿಲ್ಲ ಎಂಬುವುದಕ್ಕೆ ಈ ಪ್ರಕರಣ ಜೀವಂತ ಉದಾಹರಣೆ ಎಂದು ಸಂತ್ರಸ್ತರ ಪರ ವಕೀರರಾದ ತಬಸ್ಸುಮ್ ರಸೂಲ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕಳೆದ ಮೂರು ದಶಕಗಳಿಂದ ನಿರಂತರ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 2008 ಜನವರಿಯಿಂದ 2018 ಡಿಸೆಂಬರ್ ವರೆಗೆ 4,059 ಕಾನೂನುಬಾಹಿರ ಹತ್ಯೆಗಳು ನಡೆದಿದ್ದು, ಅದರಲ್ಲಿ 1082 ನಿರಾಯುಧ ನಾಗರಿಕರು ಸೇರಿದ್ದಾರೆ.

Join Whatsapp
Exit mobile version