Home ಟಾಪ್ ಸುದ್ದಿಗಳು ದೆಹಲಿ ಹಿಂಸಾಚಾರದಲ್ಲಿ 25 ಎಫ್.ಐ.ಆರ್: ಒಂದೇ ಚಾರ್ಜ್ ಶೀಟ್ !

ದೆಹಲಿ ಹಿಂಸಾಚಾರದಲ್ಲಿ 25 ಎಫ್.ಐ.ಆರ್: ಒಂದೇ ಚಾರ್ಜ್ ಶೀಟ್ !

ನವದೆಹಲಿ : 2021 ರ ಜನವರಿ 26 ರಂದು ಗಣರಾಜ್ಯೋತ್ಸದ ಪ್ರಯುಕ್ತ ರಾಷ್ಟ್ರ ರಾಜಧಾನಿಯಲ್ಲಿ ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್ ಜಾಥಾ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ದೆಹಲಿ ಪೊಲೀಸರು 25 ಎಫ್.ಐ.ಆರ್ ದಾಖಲಿಸಿ ಸುಮಾರು 151 ಕ್ಕೂ ಅಧಿಕ ಜನರನ್ನು ಬಂಧಿಸಿದ್ದರು. ಆದರೇ ದೆಹಲಿ ಪೊಲೀಸರಿಗೆ, ಸಾಕ್ಷ್ಯಾಧಾರದ ಕೊರತೆಯ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಕೇವಲ ಒಂದೇ ಒಂದು ಚಾರ್ಜ್ಶೀಟ್ ಸಲ್ಲಿಸಲಷ್ಟೇ ಸಾಧ್ಯವಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ಕಳೆದ ಒಂಭತ್ತು ತಿಂಗಳಿಗಳಿಂದ ರಾಷ್ಟ್ರ ರಾಜಧಾನಿ ಗಡಿಯಲ್ಲಿ ರೈತರು ರಾತ್ರಿ ಹಗಲೆನ್ನದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದೊಂದಿಗಿನ ಹಲವು ಸುತ್ತಿನ ಮಾತುಕತೆ ನಡೆದರೂ ಬಿಕ್ಕಟ್ಟು ಕೊನೆಗೊಳಿಸಲು ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ.

ಗಣರಾಜ್ಯೋತ್ಸದ ಪ್ರಯುಕ್ತ ರಾಷ್ಟ್ರ ರಾಜಧಾನಿಯಲ್ಲಿ ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್ ಜಾಥಾ ಸಂದರ್ಭದಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸರ ಲಾಠಿಚಾರ್ಜ್ ನಿಂದ ಆಕ್ರೋಶಿತಗೊಂಡ ರೈತರ ಗುಂಪು, ಐತಿಹಾಸಿಕ ಕೆಂಪು ಕೋಟೆಯೊಳಗೆ ನುಗ್ಗಿತ್ತು. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದಾಗ ಹಿಂಸಾಚಾರ ಭುಗಿಲೆದ್ದಿತ್ತು. ಈ ಕುರಿತು ಮೇ 17 ರಂದು ದೆಹಲಿ ಪೊಲೀಸರ ಅಪರಾಧ ವಿಭಾಗವು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿ ಪಂಜಾಬಿ ನಟ ದೀಪ್ ಸಿದು ಮತ್ತು ಇಕ್ಬಾಲ್ ಸಿಂಗ್ ಸೇರಿದಂತೆ 16 ಜನರ ವಿರುದ್ಧ ಫೇಸ್ ಬುಕ್ ನಲ್ಲಿ ಲೈವ್ ನೀಡಿದ ಆರೋಪ ಹೊರಿಸಿತ್ತು. ಇವರು ಪ್ರತಿಭಟನಕಾರರನ್ನು ಪ್ರಚೋದಿಸುತ್ತಿದ್ದರು ಎಂದು ಪೊಲೀಸರು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ.

Join Whatsapp
Exit mobile version