25 ಸಾವಿರ ನಿರಾಶ್ರಿತ ಕುಟುಂಬಗಳಿಗೆ ಭೂ ಮಾಲೀಕತ್ವ ನೀಡಿದ ಮಮತಾ ಸರಕಾರ

Prasthutha|

- Advertisement -

ಪಶ್ಚಿಮ ಬಂಗಾಳದ 25,000 ನಿರಾಶ್ರಿತ ಕುಟುಂಬಗಳಿಗೆ ಮಮತಾ ಸರಕಾರ ಭೂ ಮಾಲೀಕತ್ವವನ್ನು ನೀಡಿದೆ. ಯಾವುದೇ ಷರತ್ತುಗಳಿಲ್ಲದೆ ಜಮೀನಿನ ದಾಖಲೆ ನೀಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಒಟ್ಟು 1.25 ಲಕ್ಷ ಕುಟುಂಬಗಳಿಗೆ ಜಮೀನಿನ ದಾಖಲೆ ನೀಡಲಾಗುವುದು ಎಂದು ಅವರು ಹೇಳಿದರು. “ಭೂಮಿಯ ಮಾಲೀಕತ್ವವು ದೇಶದ ಪ್ರಜೆ ಎಂಬ ದಾಖಲೆಯಾಗಿದೆ. ನಿಮ್ಮ ಪೌರತ್ವವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಜಾದವ್ ಪುರದಲ್ಲಿ 1980ರಲ್ಲಿ ಕಾಂಗ್ರೆಸ್ ಸಂಸದೆಯಾಗಿದ್ದ ಸಮಯದಿಂದಲೂ ನಿರಾಶ್ರಿತರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಮಮತಾ ಹೇಳಿದ್ದಾರೆ. ಇದುವರೆಗೆ ಮತದಾನ ಹತ್ತಿರವಾಗುತ್ತಿದ್ದಂತೆ ಬಂಗಾಳಕ್ಕೆ ‘ಉಲ್ಲಾಸ ಯಾತ್ರೆ’ ನಡೆಸುವವರು ಸುಳ್ಳು ಭರವಸೆಗಳನ್ನು ನೀಡಿ ಹಿಂದುಳಿದ ಸಮುದಾಯಗಳನ್ನು ವಂಚಿಸುತ್ತಿದ್ದರೆಂದು ಮಮತಾ ಬಿಜೆಪಿಯನ್ನು ಟೀಕಿಸಿದ್ದಾರೆ.

- Advertisement -

ಮಥುವಾ ಮತ್ತು ನಮಶೂದ್ರ ಸಮುದಾಯಗಳ ಕಲ್ಯಾಣಕ್ಕಾಗಿ ಮಮತಾ ಬ್ಯಾನರ್ಜಿ ತಲಾ 10 ಕೋಟಿ ಮತ್ತು 5 ಕೋಟಿ ಘೋಷಿಸಿದ್ದಾರೆ. ಬಾಗ್ದಿ, ಮಾಜಿ ಮತ್ತು ಡುಲೆ ಸಮುದಾಯಗಳಿಗೂ ಹಣ ಬಿಡುಗಡೆ ಮಾಡಲಾಗುವುದೆಂದು ಮಮತಾ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಮಮತಾ ಅವರ ಈ ಪ್ರಕಟಣೆ ಹೊರ ಬಿದ್ದಿದೆ.

Join Whatsapp