Home ಟಾಪ್ ಸುದ್ದಿಗಳು ನಿರ್ಮಾಣ ಹಂತದಲ್ಲಿದ್ದ 22 ಅಂತಸ್ತಿನ ಕಟ್ಟಡ ಕುಸಿತ: 100 ಕ್ಕೂ ಹೆಚ್ಚು ಮಂದಿ ಕಣ್ಮರೆ !

ನಿರ್ಮಾಣ ಹಂತದಲ್ಲಿದ್ದ 22 ಅಂತಸ್ತಿನ ಕಟ್ಟಡ ಕುಸಿತ: 100 ಕ್ಕೂ ಹೆಚ್ಚು ಮಂದಿ ಕಣ್ಮರೆ !

ಲಾಗೋಸ್: ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡವೊಂದು ಏಕಾಏಕಿ ಕುಸಿದ ಪರಿಣಾಮ ಆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ 100ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿರುವ ಘಟನೆ ನೈಜೀರಿಯಾದ ಲಾಗೋಸ್’ನಲ್ಲಿ ನಡೆದಿದೆ.


ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರ ಮೂಲಕ ರಕ್ಷಣಾ ಕಾರ್ಯಾಚರಣೆಯು ಅತ್ಯಂತ ಭರದಿಂದ ನಡೆಯುತ್ತಿದ್ದು ಓರ್ವನ ಮೃತದೇಹ ಹೊರತೆಗೆಯಲಾಗಿದ್ದು, ಮೂವರನ್ನು ಇದುವರೆಗೆ ರಕ್ಷಿಸಲಾಗಿದೆ.


ಆಫ್ರಿಕಾದ ನೈಜೀರಿಯಾದಲ್ಲಿ ಕಟ್ಟಡ ಕುಸಿತ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇಲ್ಲಿನ ಗುತ್ತಿಗೆದಾರರು ಸರಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮಿಷ್ಟದಂತೆ ನಿರ್ಮಾಣ ಕಾರ್ಯಗಳನ್ನು ನಡೆಸುವುದು ಹಾಗೂ ಗುಣಮಟ್ಟವಿಲ್ಲದ ಸಕರಣೆಗಳನ್ನು ಬಳಸುವುದೇ ಪದೇ ಪದೇ ಇಂತಹ ಘಟನೆಗಳು ಮರುಕಳಿಸುವುದಕ್ಕೆ ಕಾರಣ ಎಂದು ರಾಯಿಟರ್ಸ್ ವರದಿ ಮಾಡಿದೆ.

Join Whatsapp
Exit mobile version