ಅಯೋಧ್ಯೆ: ರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ಸಂಗ್ರಹಿಸಿದ ದೇಣಿಗೆಯಲ್ಲಿ ಸುಮಾರು 15 ಸಾವಿರ ಚೆಕ್‌ಗಳು ಬೌನ್ಸ್ ಆಗಿದೆ ಎಂದು ತಿಳಿದು ಬಂದಿದೆ. ರಾಮ ಮಂದಿರ ನಿರ್ಮಾಣ ಟ್ರಸ್ಟ್ ನ ಲೆಕ್ಕಪರಿಶೋಧನಾ ವರದಿಯ ಪ್ರಕಾರ ಸುಮಾರು 22 ಕೋಟಿ ರೂ.ವರೆಗಿನ ಚೆಕ್ ಬೌನ್ಸ್ ಆಗಿದೆ ಎನ್ನಲಾಗಿದೆ.
ತಾಂತ್ರಿಕ ಸಮಸ್ಯೆಗಳು ಮತ್ತು ಚೆಕ್ ನೀಡಿದ ವ್ಯಕ್ತಿಯ ಖಾತೆಯಲ್ಲಿ ಹಣದ ಕೊರತೆಯಿಂದಾಗಿ ಚೆಕ್ ಬೌನ್ಸ್ ಆಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವಿಶ್ವ ಹಿಂದೂ ಪರಿಷತ್ ಜನವರಿ 15 ರಿಂದ ಫೆಬ್ರವರಿ 17 ರವರೆಗೆ ರಾಮ ಮಂದಿರಕ್ಕಾಗಿ ರಾಷ್ಟ್ರವ್ಯಾಪಿ ನಿಧಿ ಸಂಗ್ರಹಣೆ ನಡೆಸಿತ್ತು. ಈ ಮೂಲಕ 5,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ.