Home ಟಾಪ್ ಸುದ್ದಿಗಳು 21 ಕೋಟಿ ಬೆಲೆ ಬಾಳುವ ‘ಸುಲ್ತಾನ್’ ಇನ್ನಿಲ್ಲ!

21 ಕೋಟಿ ಬೆಲೆ ಬಾಳುವ ‘ಸುಲ್ತಾನ್’ ಇನ್ನಿಲ್ಲ!

ಚಂಡೀಗಢ: ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಸುಲ್ತಾನ್ ಎಂಬ ಹೆಸರಿನ ಅಜಾನುಬಾಹು ಕೋಣ ಮೃತಪಟ್ಟಿದೆ.

ಈ ಸುಲ್ತಾನನ ಮೌಲ್ಯ ಬರೋಬ್ಬರಿ 21 ಕೋಟಿ ಆಗಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಅದರ ಪೂರ್ಣ ಹೆಸರು ಸುಲ್ತಾನ್ ಜೋಟೆ. ಹೃದಯಾಘಾತದಿಂದ ಸುಲ್ತಾನ್ ಅನಿರೀಕ್ಷಿತವಾಗಿ ಮೃತಪಟ್ಟಿದೆ ಎಂದು ಹೇಳಲಾಗಿದೆ.

ಅಸಾಧಾರಣ ಬೆಲೆಗೆ ಹೆಸರುವಾಸಿಯಾಗಿದ್ದ ಸುಲ್ತಾನ್ ಜೋಟೆ, 2013 ರಲ್ಲಿ ಅಖಿಲ ಭಾರತ ಎನಿಮಲ್ ಬ್ಯೂಟಿ ಸ್ಪರ್ಧೆಯಲ್ಲಿ ಹರಿಯಾಣ ಸೂಪರ್ ಬುಲ್, ಜಜ್ಜಾರ್, ಕರ್ನಾಲ್ ಮತ್ತು ಹಿಸಾರ್ ಪ್ರಶಸ್ತಿಗಳನ್ನು ಗೆದ್ದಿದೆ.

ಸುಲ್ತಾನ್ 6 ಅಡಿ ಉದ್ದ ಮತ್ತು ಒಂದು ಟನ್ ತೂಕ ಹೊಂದಿದ್ದ ಎಂದು ಮಾಲೀಕ ನರೇಶ್ ತಿಳಿಸಿದ್ದಾರೆ. ಅವನು ಪ್ರತಿದಿನ 10 ಲೀಟರ್ ಹಾಲು, 20 ಕೆಜಿ ಕ್ಯಾರೆಟ್, 10 ಕೆಜಿ ಸೊಪ್ಪು ಮತ್ತು 12 ಕೆಜಿ ಒಣಹುಲ್ಲನ್ನು ಸೇವಿಸುತ್ತಿದ್ದನು.

ಸಂಜೆಯ ವೇಳೆ ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುವ ಮದ್ಯ ಮತ್ತು ವೈನ್ ಕುಡಿಯುವುದು ಸುಲ್ತಾನನ ವಿಶೇಷತೆಯಾಗಿತ್ತು. ಸುಲ್ತಾನನನ್ನು ಬಾಲ್ಯದಿಂದ ಸಾಕಿ ಬೆಳೆಸಿದ್ದು ಹರಿಯಾಣದ ಕೈತಲ್‌ನ ಬುರಖೇರಾ ಗ್ರಾಮದ ನಿವಾಸಿ ನರೇಶ್ ಬೆನಿವಾಲೆ.

ಸುಲ್ತಾನ್ ಬೆಲೆ 21 ಕೋಟಿ ರೂ.ಗೆ ಬಂದಿದ್ದರೂ ಸಹ ರಾಜಸ್ಥಾನದ ಪುಸ್ಕರ್ ಪಶು ಮೇಳದಲ್ಲಿ ಮಾಲೀಕ ನರೇಶ್ ಮಾರಾಟ ಮಾಡಲು ಸಿದ್ಧರಿರಲಿಲ್ಲ. ಎಷ್ಟು ಕೋಟಿ ಲಭಿಸಿದರೂ ತನ್ನ ಸ್ವಂತ ಮಗುವಿನಂತೆಯೇ ಇರುವ ಸುಲ್ತಾನನನ್ನು ಮಾರಾಟ ಮಾಡುವುದಿಲ್ಲ ಎಂದು ನರೇಶ್ ಆ ಸಮಯದಲ್ಲಿ ಹೇಳಿದ್ದರು.

Join Whatsapp
Exit mobile version