ಚೆನ್ನೈ: 2015 ರಲ್ಲಿ ಮೇಲ್ಜಾತಿ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ ದಲಿತ ಯುವಕ ವಿ.ಗೋಕುಲರಾಜ್ ಅವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿದ ಮಧುರೈ ವಿಶೇಷ ನ್ಯಾಯಾಲಯ ಮೇಲ್ಜಾತಿ ಸಂಘಟನೆಯ ಮುಖಂಡ ಯುವರಾಜ್ ಮತ್ತು ಸಹಚರ ಅರುಣ್ ಸೇರಿದಂತೆ ಹತ್ತು ಮಂದಿಗೆ ಮೂರು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಒಟ್ಟು 17 ಮಂದಿ ಆರೋಪಿಗಳಾಗಿದ್ದು, ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಒಬ್ಬರು ವಿಚಾರಣೆಯ ವೇಳೆ ಸಾವನ್ನಪ್ಪಿದ್ದು, ಇನ್ನೊಬ್ಬರು ತಲೆಮರೆಸಿಕೊಂಡಿದ್ದಾರೆ. ಸದ್ಯ 10 ಅಪರಾಧಿಗಳ ಪೈಕಿ ಅವರಿಗೆ ತಲಾ ಎರಡು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಎಂಟನೇ ವ್ಯಕ್ತಿಗೆ ಜೀವಾವಧಿ ಶಿಕ್ಷೆ ನೀಡಿದ್ದು, ಇಬ್ಬರಿಗೆ ಜೀವಾವಧಿ, ಐದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ತಲಾ 5000 ರೂ. ದಂಢ ವಿಧಿಸಿದೆ ಎಂದು ಹೇಳಲಾಗಿದೆ.
ಯುವರಾಜ್’ನ್ ಜೀವಾವಧಿ ಶಿಕ್ಷೆಯನ್ನು ಏಕ ಸಮಯದಲ್ಲಿ ಅನುಷ್ಠಾನಗೊಳಿಸಲಾಗುವುದೆಂದು ನ್ಯಾಯಮೂರ್ತಿ ಟಿ. ಸಂಪತ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.