ಅಹಮದಾದ್: 2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ 38 ಮಂದಿಗೆ ಮರಣದಂಡನೆ ವಿಧಿಸಿಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಈ ಸ್ಫೋಟದಲ್ಲಿ 56 ಜನರು ಸಾವಿಗೀಡಾಗಿ 200ರಷ್ಟು ಜನರು ಗಾಯಗೊಂಡಿದ್ದರು. ಅಹಮದಾಬಾದಿನ ಭದ್ರಾ ಸೆಶನ್ಸ್ ಕೋರ್ಟ್ ಶುಕ್ರವಾರ 38 ಜನರಿಗೆ ಮರಣದಂಡನೆ ವಿಧಿಸಿದೆ ಹಾಗೂ ಇತರ 11 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದೆ.
ಇಷ್ಟೊಂದು ಮಂದಿಗೆ ಮರಣದಂಡನೆ ಶಿಕ್ಷೆಯನ್ನು ವಿಚಾರರಣಾ ನ್ಯಾಯಾಲಯವೊಂದು ಭಾರತದಲ್ಲಿ ನೀಡುತ್ತಿರುವುದು ಇದೇ ಮೊದಲು.
ಇದೇ ವೇಳೆ ನ್ಯಾಯಾಧೀಶ ಎ. ಆರ್. ಪಟೇಲ್ ಅವರು ಸಾವಿಗೀಡಾದವರ ಕುಟುಂಬಕ್ಕೆ ತಲಾ ರೂ. 1 ಲಕ್ಷ, ತೀವ್ರ ಗಾಯಗೊಂಡವರ ಕುಟುಂಬಕ್ಕೆ ತಲಾ ರೂ. 50,000 ಮತ್ತು ಸಣ್ಣ ಮಟ್ಟದ ಗಾಯವಾದವರ ಕುಟುಂಬಕ್ಕೆ ರೂ. 25,000 ಪರಿಹಾರ ಧನವನ್ನು ಸರಕಾರ ನೀಡುವಂತೆ ಘೋಷಿಸಿದರು.
ಫೆಬ್ರವರಿ 8ರಂದು ಕೋರ್ಟು 49 ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಪಿತ್ತಿತು; ಈಗ ಶಿಕ್ಷೆ ಘೋಷಣೆ ಮಾಡಿದೆ. ಯುಎಪಿಎ, ಹಲವು ಐಪಿಸಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆ ನೀಡಲಾಗಿದೆ.