Home ಟಾಪ್ ಸುದ್ದಿಗಳು ಪೂರಕ ಸಾಕ್ಷ್ಯಗಳ ಹೊರತಾಗಿಯೂ SIT ಗುಜರಾತ್ ನರಮೇಧವನ್ನು ನಿರ್ಲಕ್ಷಿಸಿದೆ: ಝಕಿಯಾ ಜಾಫ್ರಿ

ಪೂರಕ ಸಾಕ್ಷ್ಯಗಳ ಹೊರತಾಗಿಯೂ SIT ಗುಜರಾತ್ ನರಮೇಧವನ್ನು ನಿರ್ಲಕ್ಷಿಸಿದೆ: ಝಕಿಯಾ ಜಾಫ್ರಿ

ಹೊಸದಿಲ್ಲಿ: ಮೋದಿ ಮತ್ತು ಇತರರ ಪಾತ್ರದ ಬಗ್ಗೆ ಇರುವ ಸಾಕ್ಷ್ಯಗಳ ಹೊರತಾಗಿಯೂ SIT ಗುಜರಾತ್ ಹತ್ಯಾಕಾಂಡವನ್ನು ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್ ಮಾಜಿ ಸಂಸದ ಇಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಸುಪ್ರೀಂ ಕೋರ್ಟಿನಲ್ಲಿ ಹೇಳಿದ್ದಾರೆ.

ಹತ್ಯಾಕಾಂಡಕ್ಕೆ ಸಂಬಂಧಿಸಿದ ಆರೋಪಿಗಳ ಹೇಳಿಕೆಯನ್ನು ಎಸ್‌ಐಟಿ ಯಾವುದೇ ತನಿಖೆ ನಡೆಸದೆ ಒಪ್ಪಿಕೊಂಡಿದೆ. ಇದನ್ನು ತನಿಖೆ ಎಂದು ಹೇಳಲಾದೀತೇ? ಎಂದು ಝಾಕಿಯಾ ಜಾಫ್ರಿ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.

ನ್ಯಾಯಯುತ ತನಿಖಾ ಅಧಿಕಾರಿ ಅಥವಾ ನೈತಿಕ ನ್ಯಾಯಾಧೀಶರಿಂದ ಸಾಕ್ಷ್ಯವನ್ನು ಎಂದಿಗೂ ನಿರಾಕರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

SIT ವಿಚಾರಣೆ ವಿರುದ್ಧ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ, ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿದೆ.

Join Whatsapp
Exit mobile version