ಲಿಬಿಯಾದಲ್ಲಿ ಚಂಡಮಾರುತ: 2000 ಮಂದಿ ಮೃತ್ಯು, ಸಾವಿರಾರು ಮಂದಿ ನಾಪತ್ತೆ

Prasthutha|

ಕೈರೋ: ಉತ್ತರ ಆಫ್ರಿಕಾದ ದೇಶದ ಪೂರ್ವ ಭಾಗಗಳಲ್ಲಿ ಡೇನಿಯಲ್ ಚಂಡಮಾರುತ ಹಾಗೂ ಪ್ರವಾಹದ ಅಬ್ಬರಕ್ಕೆ ಸುಮಾರು 2,000 ಜನರು ಮೃತಪಟ್ಟಿರುವುದಾಗಿ ಲಿಬಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

- Advertisement -

ಅಲ್-ಮಾಸ್ರ್ ಟೆಲಿವಿಷನ್ ಸ್ಟೇಷನ್‌ಗೆ ದೂರವಾಣಿ ಸಂದರ್ಶನದಲ್ಲಿ, ಪ್ರಧಾನ ಮಂತ್ರಿ ಒಸಾಮಾ ಹಮದ್ ಅವರು ಪೂರ್ವ ನಗರವಾದ ಡರ್ನಾದಲ್ಲಿ 2,000 ಜನರು ಚಂದ್ರಮರುತ ಹೊಡೆತಕ್ಕೆ ಮೃತಪಟ್ಟಿರುವುದಾಗಿ ಹಾಗೂ ಸಾವಿರಾರು ಜನರು ಕಾಣೆಯಾಗಿರುವುದಾಗಿ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಪ್ರಧಾನಿ ಸೋಮವಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿ ದೇಶಾದ್ಯಂತ ಧ್ವಜಗಳನ್ನು ಅರ್ಧಮಟ್ಟಕ್ಕೆ ಹಾರಿಸಲು ಆದೇಶಿಸಿದ್ದಾರೆ ಎನ್ನಲಾಗಿದೆ.

- Advertisement -

ಡೇನಿಯಲ್ ಚಂಡಮಾರುತದ ಬಳಿಕ ಡರ್ನಾದಲ್ಲಿ ಉಂಟಾದ ಪ್ರವಾಹದಿಂದ ಭಾರಿ ವಿನಾಶವನ್ನು ಉಂಟುಮಾಡಿದೆ ಎಂದು ಅವರು ಹೇಳಿದರು. ಇದಾದ ನಂತರ ನಗರವನ್ನು ದುರಂತ ಪ್ರದೇಶವೆಂದು ಘೋಷಿಸಲಾಗಿದೆ. ಪೂರ್ವ ಲಿಬಿಯಾ ಸರ್ಕಾರದ ಆರೋಗ್ಯ ಸಚಿವ ಓಥ್ಮಾನ್ ಅಬ್ದುಲ್ಜಲೀಲ್ ಅವರು ಸೋಮವಾರ ಮಧ್ಯಾಹ್ನ ಸೌದಿ ಒಡೆತನದ ಸುದ್ದಿ ಚಾನೆಲ್ ಅಲ್-ಅರೇಬಿಯಾಗೆ ದೂರವಾಣಿ ಸಂದರ್ಶನದಲ್ಲಿ ಸಾವಿನ ಸಂಖ್ಯೆಯನ್ನು ಘೋಷಿಸಿದರು. ಕನಿಷ್ಠ 50 ಜನರು ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version